UN networks
ಉಳ್ಳಾಲ: ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಭಾಗಿತ್ವದಲ್ಲಿ ವಿಶ್ವಮಧುಮೇಹ ದಿನದ ಅಂಗವಾಗಿ ನ.13ರಂದು ಮ್ಯಾರಥಾನ್ ಓಟ ‘ಮುಲ್ಲರ್ ರನ್’ ಆಯೋಜಿಸಲಾಗಿದೆ ಎಂದು ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆಯ ಆಡಳಿತಾಧಿಕಾರಿ ವಂ| ರೋಶನ್ ಕ್ರಾಸ್ತಾ ತಿಳಿಸಿದರು.
ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯದಲ್ಲಿ `ಮುಲ್ಲರ್ ರನ್’ ಜರ್ಸಿ ಬಿಡುಗಡೆ ಮಾಡಿ ಮಾತನಾಡಿದ ಆವರು ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆ ವಿವಿಧ ಆರೋಗ್ಯ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಇದಕ್ಕೆ ಪೂರಕವಾಗಿ ವಿಶ್ವ ಮಧುಮೇಹ ದಿಮದ ಅಂಗವಾಗಿ ‘ಮುಲ್ಲರ್ ರನ್’ ಮ್ಯಾರಥಾನ್ ಓಟ ಆಯೋಜಿಸಲಾಗಿದೆ. 5 ಮತ್ತು 15 ಕಿ.ಮೀ. ಎರಡು ವಿಭಾಗವಿದ್ದು, 5ಕಿ.ಮೀ. ಓಟ ಫಾದರ್ ಮುಲ್ಲರ್ ಹೋಮಿಯೋಪಥಿ ಕ್ಯಾಂಪಸ್‍ನಿಂದ ಬೆಳಿಗ್ಗೆ ಗಂಟೆ 7:15ಕ್ಕೆ ಪ್ರಾರಂಭಗೊಂಡು ಕುತ್ತಾರ್ ಮಾರ್ಗವಾಗಿ ಹಿಂತಿರುಗಿ ಫಾದರ್ ಮುಲ್ಲರ್ ಹೋಮಿಯೋಪಥಿ ಕ್ಯಾಂಪಸ್‍ನಲ್ಲಿ ಮುಕ್ತಾಯಗೊಳ್ಳಲಿದೆ. 15 ಕಿ.ಮೀ. ಓಟ ಬೆಳಗ್ಗೆ ಗಂಟೆ 6:30ಕ್ಕೆ ಫಾದರ್ ಮುಲ್ಲರ್ ಹೋಮಿಯೋಪಥಿ ಕ್ಯಾಂಪಸ್‍ನಿಂದ ಪ್ರಾರಂಭಗೊಂಡು ಕುತ್ತಾರ್, ತೊಕ್ಕೊಟ್ಟು , ಬೀರಿ, ಮಡ್ಯಾರ್ ಮಾರ್ಗವಾಗಿ ಕ್ಯಾಂಪಸ್‍ನಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.
ಮಂಗಳೂರಿನ ಸಂಚಾರಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಗೀತಾ ಕುಲಕರ್ಣಿ ಉದ್ಘಾಟಿಸಲಿದ್ದು, ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ವಂ| ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಮ್ಯಾರಥಾನ್ ನಲ್ಲಿ ಭಾಗವಹಿಸಲು ಈಗಾಗಲೇ 800ಕ್ಕೂ ಅ„ಕ ಓಟಗಾರರು ಹೆಸರು ನೋಂದಾಯಿಸಿಕೊಂಡಿದ್ದು, ಎರಡು ವಿಭಾಗಗಳ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನ, ಆರೋಗ್ಯ ತಪಾಸಣೆ ವೋಚರ್ ಹಾಗೂ ಗಿಫ್ಟ್ ಹ್ಯಾಂಪರ್ ನೊಂದಿಗೆ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಬಹುಮಾನಗಳನ್ನು ನೀಡಲಾಗುವುದು. ಎಲ್ಲಾ ಮ್ಯಾರಥಾನ್ ಫಿನಿಶರ್‍ಗಳಿಗೆ ಅವರ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಮ್ಯಾರಥಾನ್ ಓಟದ ಜೊತೆಗೆ ವಿಶ್ವ ಮಧುಮೇಹ ದಿನದ ಅಂಗವಾಗಿ ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಮಧುಮೇಹ ಮತ್ತು ಆಹಾರ ಪದ್ಧತಿಯ ಬಗ್ಗೆ ನವಂಬರ್ 14 ರಿಂದ 19ರವರೆಗೆ ಬೆಳಗ್ಗೆ 9.00 ರಿಂದ ಸಂಜೆ 4 ಗಂಟೆವರೆಗೆ ಒಂದು ವಾರದ ಆರೋಗ್ಯ ಶಿಬಿರ ಮತ್ತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಉಚಿತ ಶುಗರ್ ಪರೀಕ್ಷೆ ಹಾಗೂ ಮಧುಮೇಹಕ್ಕೆ ಸಂಬಂ„ಸಿದ ಪರೀಕ್ಷೆಗಳನ್ನು ಶೇ.50 ರಿಯಾಯಿತಿ ದರದಲ್ಲಿ ಮಾಡಲಾಗುವುದು ಎಂದು ತಿಳಿಸಿದರು.
ಸಹಾಯಕ ಆಡಳಿತಾ„ಕಾರಿ ರೆ| ಫಾ| ರೋಹನ್ ಡಯಾಸ್, ಉಪಪ್ರಾಂಶುಪಾಲರಾದ ಡಾ| ಇ.ಎಸ್.ಜೆ ಪ್ರಭು ಕಿರಣ್, ಡಾ| ವಿಲ್ಮಾ ಡಿ.ಸೋಜ, ವೈದ್ಯಕೀಯ ಅ„ೀಕ್ಷಕ ಡಾ| ಗಿರೀಶ್ ನಾವಡ, ಕಾರ್ಯಕ್ರಮ ಸಂಯೋಜಕ ಡಾ| ಸೂರಜ್ ಕೆ.ವಿ., ಎನ್‍ಎಸ್‍ಎಸ್ ಸೇವಾ ಸಂಯೋಜಕ ಡಾ| „ೀರಜ್ ಫೆರ್ನಾಂಡಿಸ್ ಹಾಗೂ ಮಾಧ್ಯಮ ಸಮಿತಿ ಸಂಯೋಜಕಿ ಡಾ| ಅನುಷ ಜಿ.ಎಸ್., ದೈಹಿಕ ಶಿಕ್ಷಣ ನಿರ್ದೇಶಕ ಚೆನ್ನಕೇಶವ, ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ| ಡಾಲ್ಪಿನ್ ಕಾರಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
