Site icon Ullalavani

ಜಿಲ್ಲಾಡಳಿತದ ಸಿಸಿಟಿವಿ ಕೆಡವಲು ಯತ್ನ
ಇಬ್ಬರ ಬಂಧನ

UN networks

ಉಳ್ಳಾಲ: ಸೋಮೇಶ್ವರ ದಲ್ಲಿ ಜಿಲ್ಲಾಡಳಿತ ನಿರ್ದೇಶನ ಮೇರೆಗೆ ಹಾಕಲಾಗಿದ್ದ ಸಿಸಿ ಕ್ಯಾಮರಾ ಕ್ಕೆ ಹಾನಿ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ತೂಮಿನಾಡು ನಿವಾಸಿ ದಿಶಾಂತ್ (21) ಮತ್ತು ರಕ್ಷಿತ್ (32) ಎಂದು ಗುರುತಿಸಲಾಗಿದೆ.

http://bitly.ws/wrnX


ಮರಳು ಮಾಫಿಯಾ ಕಣ್ಗಾವಲು ಇರಿಸುವ ಸಲುವಾಗಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಇದನ್ನು ಕಾರಿನಲ್ಲಿ ಬಂದು ಇಬ್ಬರು ಹಾನಿಗೈಯ್ಯಲು ಯತ್ನಿಸಿದ್ದರು. ಈ ಕುರಿತು ಸಿಸಿಟಿವಿಯಲ್ಲಿ ಸೆರೆಸಿಕ್ಕ ದೃಶ್ಯದಂತೆ ಉಳ್ಳಾಲದ ಗ್ರಾಮ ಲೆಕ್ಕಾಧಿಕಾರಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಕೇರಳ ತೂಮಿನಾಡು ಮೂಲದ ಇಬ್ಬರನ್ನು ಬಂಧಿಸಿದ್ದಾರೆ. ಮರಳು ಮಾಫಿಯಾ ಕೈವಾಡವೋ ಅಥವಾ ಹುಚ್ಚಾಟವೋ ಅನ್ನುವ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ. ತಿಂಗಳ ಹಿಂದೆ ಸೆ.10 ರಂದು ಸೋಮೇಶ್ವರ ದೇವಸ್ಥಾನದ ಸಮುದ್ರ ತೀರದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯನ್ನು ನಾಲ್ವರ ತಂಡ ಲಾರಿಯನ್ನು ಗುದ್ದಿ ಹಾನಿಗೊಳಿಸಿತ್ತು. ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.

Exit mobile version