Site icon Ullalavani

ಕೃಷಿ ಚಟುವಟಿಕೆ ಉಳಿಸುವಲ್ಲಿ ಶ್ರೀ ಜೈ ಹನುಮಾನ್ ಕ್ರೀಡಾಮಂಡಳಿಯ ಕಾರ್ಯವೈಖರಿ ಎಲ್ಲರಿಗೂ ಮಾದರಿ- ವಿಲ್ಪ್ರೇಡ್ ಡಿ’ಸೋಜ

UN networks

ಉಳ್ಳಾಲ: ಕಳೆದ ಕೆಲವು ವರುಷಗಳಿಂದ ಕುತ್ತಾರು ಬಟ್ಟೆದಡಿ ಭಾಗದಲ್ಲಿ ಹಡಿಲು ಬಿದ್ದಿರುವ ಕೃಷಿ ಭೂಮಿಯನ್ನು ಮತ್ತೆ ಫಲತ್ತಾಗಿಸಬೇಕೆಂಬ ಉದ್ದೇಶದಿಂದ ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿ ಸದಸ್ಯರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು ವಿಶೇಷವಾಗಿದೆ,. ಅದರಲ್ಲೂ ಈ ಆಧುನಿಕ ಕಾಲಘಟ್ಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯುವಸಮುದಾಯ ಈ ಪ್ರದೇಶದಲ್ಲಿ ಸತತ 6 ವರುಷಗಳಿಂದ ಮುಂದೆನಿಂತು ಭತ್ತದ ಕೃಷಿ ಮಾಡುತ್ತಿರುವುದು ಹೆಮ್ಮೆ ಅನಿಸುತ್ತಿದೆ ಎಂದು ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಲ್ಪ್ರೆಡ್ ಡಿ’ಸೋಜ ಹೇಳಿದರು.


ಅವರು ಕುತ್ತಾರು ಬಟ್ಟೆದಡಿಯಲ್ಲಿ ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿಯ ಆಯೋಜಿಸಿದ 6ನೇ ವರ್ಷದ ಕೃಷಿ ಚಟುವಟಿಕೆಯನ್ನು ಉದ್ಘಾಟಿಸಿ, ಅದರಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮದ ಕೃಷಿ ಚಟುವಟಿಕೆಗಳಿಂದ ಮುನ್ನೂರು ಗ್ರಾಮ ಹಲವಾರು ಪ್ರಶಸ್ತಿಗಳಿಗೆ ಭಾಜನವಾಗುತ್ತಿದೆ. ನಿಮ್ಮ ಈ ಕೃಷಿ ಚಟುವಟಿಕೆಯನ್ನು ಉಳಿಸಿವ ಯೋಜನೆ ಫಲಪ್ರಧವಾಗಲಿ, ಈ ಕಾರ್ಯಕ್ರಮ ಎಲ್ಲರಿಗೂ ಉತ್ತೇಜನ ನೀಡಲಿ ಎಂದರು.
ಇದೇ ವೇಳೆ ಉಪಸ್ಥಿತರಿದ್ದ ಮುನ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೀವ ರವೀಂದ್ರ ನಾಯ್ಕ್ ಮಾತನಾಡುತ್ತಾ ಹನುಮಾನ್ ಕ್ರೀಡಾ ಮಂಡಳಿಯ ಎಲ್ಲಾ ಚಟುವಟಿಕೆಗಳನ್ನು ಬಹಳ ಹತ್ತಿರದಿಂದ ನೋಡಿದವನು, ಈ ರೀತಿಯ ಸಂಸ್ಥೆ ನಮ್ಮ ಗ್ರಾಮದಲ್ಲಿರುವುದು ನಮಗೆ ಹೆಮ್ಮೆ , ಕೃಷಿ ಉಳಿಸಲು ಈ ಭಾಗದ ಯುವಜನರ ಕಾರ್ಯ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ , ಮುನ್ನೂರು ಗ್ರಾಮ ಪಂಚಾಯತ್ ನಿಂದ ಎಲ್ಲಾ ರೀತಿಯ ಸಹಕಾರಗಳನ್ನು ನಿಮಗೆ ನೀಡುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಜೇಶ್ವರಿ ತಳೆನೀರು, ರೈತ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ವಿಶ್ವನಾಥ ತೇವುಲ, ಪಂಚಾಯತ್ ಸದಸ್ಯರಾದ ಮಹಾಬಲ.ಟಿ ದೆಪ್ಪೆಲಿಮಾರ್, ಹನುಮಾನ್ ಕ್ರೀಡಾ ಮಂಡಳಿ ಅಧ್ಯಕ್ಷರಾದ ಶೇಖರ್ ಕುಂದರ್ , ಕಾರ್ಯದರ್ಶಿ ದೀಕ್ಷೀತ್ ಕಂಪ, ಮಹಿಳಾ ಸಮಿತಿ ಅಧ್ಯಕ್ಷರಾದ ಗಾಯತ್ರಿ ಬಟ್ಟೆದಡಿ, ಕಾರ್ಯದರ್ಶಿ ತೇಜಶ್ರೀ ಕಂಪ ಉಪಸ್ಥಿತರಿದ್ದರು.

Exit mobile version