UN networks
ಮಂಗಳೂರು: ಸಿಐಎಸ್ಎಫ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗುಂಡು ಹಾರಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳೂರಿನ ನವಮಂಗಳೂರು ಗೇಟ್ ನಲ್ಲಿ ಬುಧವಾರದಂದು ನಡೆದಿದ್ದು ಕೌಟುಂಬಿಕ ಸಮಸ್ಯೆಯಿಂದ ಮನ ನೊಂದು ಆತ್ಮಹತ್ಯೆ ಗೆ ಯತ್ನಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ರಾಜಸ್ಥಾನದ ಭರತ್ ಪುರ್ ಜಿಲ್ಲೆಯ ಜ್ಯೋತಿ ಬಾಯಿ(33) ಆತ್ಮಹತ್ಯೆ ಯತ್ನಿಸಿದವರು.
ಸಿಐಎಸ್ಎಫ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿದ್ದ ಇವರು ‘ಮನಸು ನೊಂದಿದೆ, ನನ್ನ ಈ ಸ್ಥಿತಿಗೆ ನಾನೇ ಕಾರಣ’ ಎಂದು ಹಿಂದಿಯಲ್ಲಿ ಡೆತ್ ನೋಟ್ ಬರೆದು ಗುಂಡು ಹಾರಿಸಿಕೊಂಡಿದ್ದಾರೆ.ಸದ್ಯ ಗಂಭೀರ ಸ್ಥಿತಿಯಲ್ಲಿರುವ ಜ್ಯೋತಿ ಬಾಯಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜ್ಯೋತಿ ಪತಿ ಓಂಬೀರ್ ಸಿಂಗ್ ಮಂಗಳೂರಿನ ಎಂಆರ್ ಪಿಎಲ್ ನಲ್ಲಿ ಅಸಿಸ್ಟೆಂಟ್ ಕಮಾಂಡೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಪಣಂಬೂರು ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.
