Site icon Ullalavani

ಮರಳು ಸಾಗಾಟ ಲಾರಿಗೆ ಬೈಕ್ ಢಿಕ್ಕಿ
ಯುವಕನಿಗೆ ಗಾಯ, ಸ್ಥಳದಲ್ಲಿ ಉದ್ವಿಘ್ನ ಸ್ಥಿತಿ

UN networks

ಉಳ್ಳಾಲ: ಮರಳು ಸಾಗಾಟದ ಲಾರಿಯ ಬೆನ್ನತ್ತಿದ ಯುವಕ ಆಯತಪ್ಪಿ ಲಾರಿ ಹಿಂಭಾಗಕ್ಕೆ ಢಿಕ್ಕಿ ಹೊಡೆದು ತಲೆಗೆ ಗಾಯಗೊಂಡ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಚ್ಚಿಲ ಕೋಟೆ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.

ಮರಳು ದಂಧೆಕೋರರು ಯುವಕನ ಕೊಲೆಗೆ ಯತ್ನಿಸಿದ್ದಾರೆಂದು ಆರೋಪಿಸಿ ಮರಳು ಲಾರಿಯನ್ನು ತಡೆದು ಸ್ಥಳೀಯರು ಪ್ರತಿಭಟಿಸಿದ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು.

ಉಚ್ಚಿಲ ನಿವಾಸಿ ಕಿಶೋರ್ ಗಾಯಾಳು .ಸೆ.೧೮ ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಉಚ್ಚಿಲ ಪ್ರದೇಶಕ್ಕೆ ದಾಳಿ ನಡೆಸಿ ಹಲವು ಲೋಡ್ ದಾಸ್ತಾನಿರಿಸಿದ್ದ ಮರಳು ವಶಕ್ಕೆ ಪಡೆದುಕೊಂಡಿದ್ದರು. ವಶಪಡಿಸಿಕೊಂಡ ಮರಳನ್ನು ತೊಕ್ಕೊಟ್ಟು ವಿನಲ್ಲಿ ಖಾಸಗಿಯವರು ಸರಕಾರಕ್ಕೆ ಕಟ್ಟಡವೊಂದನ್ನು ಕಟ್ಟಿ ಕೊಡುವ ಸೈಟಿಗೆ ಅನುಮತಿ ಪಡೆದು ಸಾಗಾಟ ನಡೆಸುತ್ತಿದ್ದರು ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಆದರೆ ತಡರಾತ್ರಿ ಮರಳು ಸಾಗಾಟ ನಡೆಸುತ್ತಿರುವುದರ ವಿರುದ್ಧ ಸಂಶಯ ವ್ಯಕ್ತಪಡಿಸಿದ ಸ್ಥಳೀಯರು ಲಾರಿಯನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದಾರೆ. ಈ ನಡುವೆ ಸ್ಥಳಕ್ಕೆ ಭೇಟಿ ನೀಡಿದ ಉಳ್ಳಾಲ ಎಸ್.ಐ ಪ್ರದೀಪ್ ನೇತೃತ್ವದ ಪೊಲೀಸರ ತಂಡ ಅನುಮತಿ ಇರುವುದಾಗಿ ತಿಳಿಸುತ್ತಿದ್ದಂತೆ ಸ್ಥಳೀಯರು ಪೊಲೀಸರ ವಿರುದ್ಧ ಹರಿಹಾಯ್ದು, ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅನುಮತಿ ಮೇರೆಗೆ ಮರಳು ಸಾಗಾಟ ನಡೆಸುತ್ತಿರುವುದರಿಂದ ಯಾವುದೇ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಅಪಘಾತ ಪ್ರಕರಣಕ್ಕೆ ಸಂಬAಧಿಸಿ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Exit mobile version