Site icon Ullalavani

ಅವಹೇಳನಕಾರಿ  ಪೋಸ್ಟ್: ಸುನೀಲ್ ಬಜಿಲಕೇರಿ  ಬಂಧನ

UN networks

ಮಂಗಳೂರು: ನಮೀಬಿಯಾ ಚೀತಾಗೆ ಸೀಮಂತ ಯಾವಾಗ ಎಂಬ ಶೀರ್ಷಿಕೆಯನ್ನು ಬರೆದು ಗರ್ಭಿಣಿಯ ಫೋಟೋಗೆ ಚೀತಾದ ಮುಖ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲದಲಿ ಅವಹೇಳನಕೆ ಪೋಸ್ಟ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.


ಫೇಸ್ ಬುಕ್ ನಲ್ಲಿ ಗರ್ಭಿಣಿ ಬಗ್ಗೆ ಅವಹೇಳನಕಾರಿ ಬರಹ ಬರೆದಿದ್ದು ‘ನಮೀಬಿಯಾ ಚೀತಾಗೆ ಸೀಮಂತ ಯಾವಾಗ?’ ಅಂತ ಪೋಸ್ಟ್ ಮಾಡಿದ್ದರು.‌ಈ ಮೂಲಕ ಚಿರತೆ ಚಿತ್ರ ಬಳಸಿ ಗರ್ಭಿಣಿ ಮತ್ತು ಭಾರತೀಯ ಸಂಸ್ಕೃತಿಗೆ ಅವಹೇಳನ ಅಂತ ಎಡಪದವು ಗ್ರಾಮದ ಮಹಿಳೆ ಬಜಪೆ ಠಾಣೆ ಪೊಲೀಸ್ ದೂರು ನೀಡಿದ್ದರು.

ಸುನೀಲ್ ಬಜಿಲಕೇರಿ ಈ ಮೊದಲು ಬಿಜೆಪಿ ಮತ್ತು ಸರ್ಕಾರದ ವಿರುದ್ದ ಟೀಕೆ ಮಾಡುತ್ತಾ ಬರುತ್ತಿದ್ದರು.ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ವಿಚಾರದಲ್ಲಿ ಪೋಸ್ಟ್ ಎಡಿಟ್ ಮಾಡಿ ಬಂಧನವಾಗಿದ್ದರು. ಈ ಹಿಂದೆ ಹಿಂದೂ ಸಂಘಟನೆಯಲ್ಲಿದ್ದು, ಸದ್ಯ ಸಂಘಟನೆಗಳಿಂದ ಹೊರಬಂದಿರುವ ಸುನೀಲ್
ತನ್ನ ಸಾಮಾಜಿಕ ತಾಣಗಳಲ್ಲಿ ಹಲವು ಬಿಜೆಪಿ ನಾಯಕರ ಬಗ್ಗೆ ಟೀಕೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ನಮೀಬಿಯಾದಿಂದ ತಂದಿದ್ದ ಚೀತಾದ ಹೆಸರಲ್ಲಿ ಮತ್ತೆ ಅವಹೇಳನದ ಪೋಸ್ಟ್ ಹಾಕುವ ಮೂಲಕ ಬಂಧನಕ್ಕೊಳಗಾಗಿದ್ದಾರೆ.

Exit mobile version