Site icon Ullalavani

ಕಾಪಿಕಾಡ್ ಯೂಟರ್ನ್ ತಕ್ಷಣವೇ ಮುಚ್ಚುತ್ತೇವೆ , ಅಂಬಿಕಾರೋಡಿನಲ್ಲಿ ತೆರೆಯಲು ಪೊಲೀಸರಿಂದ ಅನುಮತಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

UN NEWS NETWORKS
ತೊಕ್ಕೊಟ್ಟು : ಇಲ್ಲಿನ ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿ ಕಾಪಿಕಾಡು , ಉಳ್ಳಾಲ ಇವರು ಕಾಪಿಕಾಡ್ ಯೂಟರ್ನ್ ರಸ್ತೆ ಓಪನನ್ನು ಮುಚ್ಚುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಸಲ್ಲಿಸಿದ ಮನವಿಯಂತೆ ಸ್ಥಳಕ್ಕೆ ಭೇಟಿ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಪೊಲೀಸ್ ಅನುಮತಿ ಪಡೆದು ತಕ್ಷಣಕ್ಕೆ ಅಂಬಿಕಾ ರೋಡಿನ ಎದುರು ಗಡೆಯಿಂದ ಡಿವೈಡರ್ ತೆರೆದು ಕುಂಪಲ ಹಾಗೂ ಅಂಬಿಕಾರೋಡಿನ ನಿವಾಸಿಗಳಿಗೆ ಹೆದ್ದಾರಿ ದಾಟಲು ಅನುಮತಿ ನೀಡುವುದಾಗಿ ಭರವಸೆ ನೀಡಿದ್ದಾರೆ.

ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಸಮಿತಿಯಿಂದ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ    ಓವರ್ ಬ್ರಿಡ್ಜ್ನಿಂದ ಬೈಪಾಸ್ ರೋಡ್ ಕುಂಪಲ ಹೊರಗೆ  ಸರ್ವಿಸ್ ರಸ್ತೆ ಮತ್ತು  ಅವೈಜ್ಞಾನಿಕ ತಿರುವಿನ ರದ್ಧತಿಯ ಬಗ್ಗೆ ಮನವಿಯನ್ನು ನೀಡಲಾಯಿತು 
ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಸಮಿತಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರುಗಳಿಗೆ ಮನವಿ ಸಲ್ಲಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಲಿಂಗೇಗೌಡ ನೇತೃತ್ವದಲ್ಲಿ ಅಧಿಕಾರಿಗಳು ತೊಕ್ಕೊಟ್ಟು ಕಾಪಿಕಾಡುವಿಗೆ ಭೇಟಿಕೊಟ್ಟರು

ತೊಕ್ಕೊಟ್ಟು ಫ್ಲೈಓವರ್ ಮುಂದಕ್ಕೆ ಕಾಪಿಕಾಡಿನಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಯೂಟರ್ನ್ ಜನರ ಪ್ರಾಣ ಕಸಿಯುತ್ತಿದೆ. ಸಮರ್ಪಕ ಸರ್ವಿಸ್ ರಸ್ತೆಯಿಲ್ಲದೆ ಇಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಲೇ ಇದೆ. ಒಂದೂವರೆ ವರ್ಷದ ಅವಧಿಯಲ್ಲಿ ಏಳು ಮಂದಿ ಅಪಘಾತದಿಂದ ಮೃತಪಟ್ಟಿದ್ದಾರೆ. ಜನರ ಪ್ರಾಣ ಹಾಗೂ ವಾಹನ ಸವಾರರ ಹಿತದೃಷ್ಟಿಯಿಂದ ತಕ್ಷಣ ಕಾಪಿಕಾಡಿನ ಅವೈಜ್ಞಾನಿಕ ಯೂಟರ್ನ್ ಮುಚ್ಚಬೇಕು. ಪ್ರಸ್ತಾವಿತ ಸರ್ವಿಸ್ ರಸ್ತೆಯನ್ನು ಕುಂಪಲ ಬೈಪಾಸ್ ತನಕ ವಿಸ್ತರಿಸಬೇಕು. ಎರಡು ವರ್ಷಗಳ ಹಿಂದೆ ತೊಕ್ಕೊಟ್ಟು ಬಳಿ ಉಳ್ಳಾಲ ಕ್ರಾಸ್ ಬೈಕಿನಲ್ಲಿ ದಾಟುತ್ತಿದ್ದ ದಂಪತಿಗೆ ಲಾರಿ ಢಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿತ್ತು. ಬಳಿಕ ನಡೆದ ಪ್ರತಿಭಟನೆಯಿಂದ ಅಲ್ಲಿನ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಕಾಪಿಕಾಡ್ ಬಳಿ ರಸ್ತೆಯನ್ನು ತೆರೆಯಲಾಗಿತ್ತು. ಹೆದ್ದಾರಿ ಮೂಲನಕ್ಷೆಯಲ್ಲಿ ಇಲ್ಲದಿದ್ದರೂ ಕಾಪಿಕಾಡಿನಲ್ಲಿ ಯೂಟರ್ನ್ ಓಪನ್ ಮಾಡಿ ಸರ್ವಿಸ್ ರಸ್ತೆಯನ್ನು ನೀಡದೇ ಜನ ಸಂಕಷ್ಟಕ್ಕೆ ಒಳಗಾಗುತ್ತಿದ್ದರು. ವಿರುದ್ಧ ಧಿಕ್ಕಿನಲ್ಲಿ ಹೆಚ್ಚಾಗಿ ವಾಹನಗಳು ಬಂದು ನಿತ್ಯ ಅಪಘಾತಗಳು ಸಂಭವಿಸುತ್ತಲೇ ಇದೆ. ಪೊಲೀಸರು ಕೂಡ ಅಸಹಾಯಕರಾಗಿ ನಿಲ್ಲುವಂತಹ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿ ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿ, ದ.ಕ ಜಿಲ್ಲಾಧಿಕಾರಿಗಳಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು.

ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ಜೊತೆಗೆ ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಸಮಿತಿ

ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ಜೊತೆಗೆ ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಸಮಿತಿ

ಅದರಂತೆ ಹೆದ್ದಾರಿ ಪ್ರಾಧಿಕಾರದ ನಿರ್ದೇಶಕ ಲಿಂಗೆ ಗೌಡ ಸ್ಥಳಕ್ಕೆ ಭೇಟಿ ಮಾಡಿ ಕಾಪಿಕಾಡ್ ನಿಂದ ಅಂಬಿಕಾ ರಸ್ತೆಯವರೆಗೆ ತಪಾಸಣೆ ಕಾರ್ಯ ಕೈಗೊಂಡು ಹೋರಾಟ ಸಮಿತಿಯ ಗೌರವ ಅಧ್ಯಕ್ಷರ, ಅಧ್ಯಕ್ಷರ, ಕಾರ್ಯದರ್ಶಿಗಳ ಹಾಗೂ ಸದಸ್ಯರುಗಳ ಮಾತುಗಳನ್ನು ಆಲಿಸಿ ಅಸಮರ್ಪಕ ಸರ್ವಿಸ್ ರಸ್ತೆ ಹಾಗೂ ಕಾಪಿಕಾಡ್ ಕ್ರಾಸ್‌ಗಳಲ್ಲಿ ಉಂಟಾಗುವ ಜೀವಹಾನಿ ಮತ್ತು ಅಪಘಾತಗಳ ಮಾಹಿತಿಯನ್ನು ತಿಳಿದು, ತಕ್ಷಣಕ್ಕೆ ಅಂಬಿಕಾ ರೋಡಿನ ಎದುರು ಗಡೆಯಿಂದ ಡಿವೈಡರ್ ತಿಳಿ ಗೊಳಿಸಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿ ಕುಂಪಲ ಹಾಗೂ ಅಂಬಿಕಾ ನಗರದ ನಿವಾಸಿಗಳು ಈ ರಸ್ತೆಯ ಕ್ರಾಸ್ ಮೂಲಕ ಹೆದ್ದಾರಿಯನ್ನು ಉಪಯೋಗಿಸಲು ಅನುಮತಿ ನೀಡಿದರು. ಅದೇ ರೀತಿ ಸರ್ವಿಸ್ ರಸ್ತೆಯನ್ನು ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಕುಂಪಲ ಬೈಪಾಸ್ ರವರೆಗೆ ವಿಸ್ತರಿಸಲು ಸಂಸದರು ಹಾಗೂ ಶಾಸಕರುಗಳಿಗೆ ಮನವಿಯನ್ನು ನೀಡಿ ಅವರಿಂದ ಒತ್ತಡ ತರಲು ಎಲ್ಲರೂ ಮತ್ತೊಮ್ಮೆ ಒಟ್ಟು ಸೇರಬೇಕು. ಜನಪ್ರತಿನಿಧಿಗಳು ಹೆದ್ದಾರಿ ಪ್ರಾಧಿಕಾರಕ್ಕೆ ಈ ಕೆಲಸವನ್ನು ಮುಂದುವರಿಸಲು ಅನುವು ಮಾಡಿದರೆ ಪ್ರಾಧಿಕಾರವು ಹೆಚ್ಚಿನ ಮುತುವರ್ಜಿ ವಹಿಸಿ ಸರ್ವಿಸ್ ರಸ್ತೆಯನ್ನು ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿದರು.ಈ ವೇಳೆ ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿ ಕಾಪಿಕಾಡು ಅಧ್ಯಕ್ಷ ಸುಕುಮಾರ್‌ ತೊಕ್ಕೊಟ್ಟು, ಪ್ರ. ಕಾ ತಾರನಾಥ್‌ ಗಟ್ಟಿ ಕಾಪಿಕಾಡ್,‌ ಗೌರವಾಧ್ಯಕ್ಷ ಈಶ್ವರ್‌ ಉಳ್ಳಾಲ್‌, ಗೌರವ ಸಲಹೆಗಾರರಾದ ಭವಾನಿ, ರಘುರಾಮ್‌ ಶೆಟ್ಟಿ, ಪ್ರಶಾಂತ್‌ ಕಾಪಿಕಾಡ್‌, ದಿನೇಶ್‌ ರೈ, ಉಪಾಧ್ಯಕ್ಷರುಗಳಾದ ಗೋಪಿನಾಥ್‌ ಕಾಪಿಕಾಡ್‌, ದಮಯಂತಿ, ಗಣೇಶ್‌ ಕಾಪಿಕಾಡ್‌, ಲಾಜರ್‌, ಜನಾರ್ದನ್‌, ಭಾಸ್ಕರ್‌ ಗಟ್ಟಿ, ಹ್ಯಾರಿ ಡಿಸೋಜ, ಸದಸ್ಯರುಗಳಾದ ಲಿಯೋ ಡಿಸೋಜ, ಅರುಣ್‌ ಓವರ್‌ ಬ್ರಿಡ್ಜ್‌, ವಿನಿತ್‌, ಚರಣ್‌, ಚಂದ್ರಕಾಂತ್‌, ಕಿರಣ್‌ ಕಾಪಿಕಾಡ್‌, ಕೂಸಪ್ಪ ಗಟ್ಟಿ, ಆದೀಶ್‌, ನೀಕ್ಷಿತ್‌, ದಿನೇಶ್‌ ಭಟ್‌, ರೋಹಿದಾಸ್‌ ತೊಕ್ಕೊಟ್ಟು, ಅಶ್ವಿನ್‌ , ರಾಜೇಶ್‌ ಗಟ್ಟಿ ಉಪಸ್ಥಿತರಿದ್ದರು.

Exit mobile version