Site icon Ullalavani

ದಸರಾ ದೇಗುಲ ದರ್ಶನ, ತೊಕ್ಕೊಟ್ಟುವಿನಿಂದ ಎರಡು ಕೆಎಸ್‌ಆರ್‌ಟಿಸಿ ಬಸ್‌ಗೆ ಚಾಲನೆ

UN NEWS NETWORKS

ಉಳ್ಳಾಲ: ಒಂಭತ್ತು ದಿನಗಳ ಕಾಲ ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಉಳ್ಳಾಲ ಭಾಗದಿಂದ ಭೇಟಿ ನೀಡಲು ಅವಕಾಶ ಕಲ್ಪಿಸಿರುವ ಕೆಎಸ್ ಆರ್ ಟಿಸಿ ಅಧಿಕಾರಿಗಳ ಸೇವೆ ಕೃತಜ್ಞತಾಪೂರ್ವ, ಮೊದಲ ದಿನದಲ್ಲಿಯೇ ಜನರಿಂದ ಉತ್ತಮ  ಸ್ಪಂಧನೆ ದೊರೆತಿರುವುದು ಶ್ಲಾಘನೀಯ ಎಂದು  ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.

ದಸರಾ ದೇಗುಲ ದರ್ಶನಕ್ಕೆ  ತೊಕ್ಕೊಟ್ಟು ಜಂಕ್ಷನ್ನಿನಿAದ ಎರಡು ಕೆಎಸ್‌ಆರ್ ಟಿಸಿ ಬಸ್ಸುಗಳು  ಬೀಳ್ಕೊಡುಗೆ ನಡೆಸಿ ಮಾತನಾಡಿದರು.

ಒ೦ದು ದೇವಸ್ಥಾನಕ್ಕೆ ಹೋಗಲು ರೂ.೪೦೦ ಖರ್ಚಾಗುತಿತ್ತು. ಇದೀಗ ೯ ದೇವಸ್ಥಾನಗಳಿಗೆ ರೂ.೩೦೦ ರಂತೆ ಸೇವೆಯನ್ನು ಒದಗಿಸಿರುವ ಕೆಎಸ್‌ಆರ್‌ಟಿಸಿ ಸೇವೆಯನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿರಿ.  ಒಂದು ಬಸ್ಸಿನ ಬೇಡಿಕೆ ಇಟ್ಟಿದ್ದರೂ, ಹೆಚ್ಚು ಪ್ರಯಾಣಿಕರು ಬುಕಿಂಗ್ ನಡೆಸಿದ ಫಲವಾಗಿ ಇಂದು ಎರಡು ಬಸ್ಸುಗಳನ್ನು ತೊಕ್ಕೊಟ್ಟುವಿಗೆ ಆಗಮಿಸಿದೆ. ಸರಕಾರಿ ಸೇವೆಯನ್ನು ಪ್ರಾಮಾಣಿಕವಾಗಿ ಒದಗಿಸಿಕೊಡುವಲ್ಲಿ ಜಿಲ್ಲೆಯ ಸಂಸದರು, ಉಸ್ತುವಾರಿ ಸಚಿವರು ಹಾಗೂ ಮಂಗಳೂರು ದಕ್ಷಿಣ ಶಾಸಕರ ಬೆಂಬಲ ಅಭಿನಂದನೀಯ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಹೇಮಂತ್ ಶೆಟ್ಟಿ,  ಕೋಟೆಕಾರ್ ಶಕ್ತಿ ಕೇಂದ್ರದ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಉಳ್ಳಾಲ ನಗರಸಭೆ ಸದಸ್ಯ ರಾಜೇಶ್ ಕೆರೆಬೈಲ್,  ಮಾಜಿ ಕೌನ್ಸಿಲರ್ ದಯಾನಂದ ತೊಕ್ಕೊಟ್ಟು, ಕೋಟೆಕಾರ್ ಪಟ್ಟನ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಅನಿಲ್ ಬಗಂಬಿಲ,  ಪಟ್ಟಣ ಪಂಚಾಯತ್ ಸದಸ್ಯ ಪ್ರವೀಣ್ ಐ ಬಗಂಬಿಲ, ತೊಕ್ಕೊಟ್ಟು ಶ್ರೀ ಸಾಯಿ ಪರಿವಾರ್ ಟ್ರಸ್ಟ್ ನ ಪುರುಷೋತ್ತಮ ಕಲ್ಲಾಪು, ಪ್ರವೀಣ್ ಎಸ್ ಕುಂಪಲ, ಯುವ ಮೋರ್ಚಾ ಸದಸ್ಯ ಪ್ರದೀಪ್ ಶೆಟ್ಟಿ ಬೆರಿಕೆ, ಕೌಶಿಕ್ ಕೊಲ್ಯ, ಮಹಿಳಾ ಮೋರ್ಚಾದ ಪೂರ್ಣಿಮ ರಮಣಿ ಮೊದಲಾದವರು ಉಪಸ್ಥಿತರಿದ್ದರು.

ಮಂಡಲ ಕಾರ್ಯದರ್ಶಿ ಆನಂದ ಶೆಟ್ಟಿ ನಿರೂಪಿಸಿದರು. ದೇಗುಲ ದರ್ಶನಕ್ಕೆ ಆಗಮಿಸುವವರು ಬೆಳಗ್ಗೆ ೭.೩೦ ಕ್ಕೆ ಸರಿಯಾಗಿ ತೊಕ್ಕೊಟ್ಟು ಬಸ್ಸು ನಿಲ್ದಾಣದಲ್ಲಿ ಉಪಸ್ಥಿತರಿರಬೇಕು ಎಂದು ಕೆಎಸ್ ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

Exit mobile version