UN NEWS NETWORKS
UN NEWS NETWORKS
ಉಳ್ಳಾಲ: ಜನಸೇವೆಯ ಕರ್ತವ್ಯವನ್ನು ನಿತ್ಯ ನಡೆಸುವ ಕೋಟೆಕಾರು ಪಟ್ಟಣ ಪಂಚಾಯಿತಿ ಮಹಿಳಾ ಸಿಬ್ಬಂದಿಗಳಿಗೆ ಕೋಟೆಕಾರು ಪಟ್ಟಣ ಪಂಚಾಯಿತಿ ವಾಡ್ ð ನಂ-೧೧ರ ಸದಸ್ಯ ಹರೀಶ್ ರಾವ್ ನೇತೃತ್ವದಲ್ಲಿ ಅರಶಿನ ಕುಂಕುಮದ ಜೊತೆಗೆ ಸೀರೆಯನ್ನು ನೀಡುವ ಮೂಲಕ ದಸರಾ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಕೀಲರ ಸಂಘದ ಅಡಳಿತ ಮಂಡಳಿ ಸದಸ್ಯ ದಿನಕರ್ ಶೆಟ್ಟಿ ಮಾತನಾಡಿ, ಜನಸಾಮಾನ್ಯರ ಸೇವೆ ನಡೆಸುವ ಪ್ರತಿನಿಧಿಗಳನ್ನು ಗುರುತಿಸುವ ಕಾರ್ಯಕ್ರಮ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಎಲ್ಲರಿಗೂ ಉತ್ತಮ ಸೇವೆಯನ್ನು ಸಿಬ್ಬಂದಿ ಒದಗಿಸಲು ಇದೊಂದು ಪ್ರೋತ್ಸಾಹದ ನಡೆ. ಈ ಮೂಲಕ ಜನರ ಮತ್ತು ಪಟ್ಟಣ ಪಂಚಾಯಿತಿ ನಡುವೆ ಆತ್ಮೀಯ ಬಾಂಧವ್ಯ ವೃದ್ಧಿಯಾಗಲು ಸಾಧ್ಯ ಎಂದರು.
ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್ ರಾವ್ ಮಡ್ಯಾರ್ ಮಾತನಾಡಿ, ಮಹಿಳೆಯರಿಗೆ ದೇವಿಯ ಸ್ಥಾನ ಇರುವುದರಿಂದ ನವರಾತ್ರಿ ಹಬ್ಬದ ಪ್ರಯುಕ್ತ ಕೋಟೆಕಾರಿನ ಎಲ್ಲಾ ಸಾರ್ವಜನಿಕರ ಪರವಾಗಿ ಮಹಿಳಾ ಸಿಬ್ಬಂದಿಯನ್ನು ಅಭಿನಂದಿಸಲಾಗಿದೆ. ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಸೇವೆಯನ್ನು ಒದಗಿಸುತ್ತಿರುವುದರ ವಿಶೇಷ ಕಾಳಜಿಯನ್ನಿಟ್ಟುಕೊಂಡು ಗುರುತಿಸಿದ್ದೇವೆ ಎಂದರು.
ಈ ಸಂದರ್ಭ ಸಾಯಿನಗರ ಕೊರಗಜ್ಜ ಸೇವಾ ಸಮಿತಿ ಪ್ರಮುಖ ಕೃಷ್ಣಕಾಂತ್ ಸಾಯಿನಗರ, ರೋಹಿತ್ ಶೆಟ್ಟಿ, ಜ್ಞಾನೇಶ್, ಲಿಖಿತ್, ಸುಜೀರ್ ಮಡ್ಯಾರ್, ಯಶೋಧಾ ಮಡ್ಯಾರ್, ರೇಷ್ಮಾ ಮಡ್ಯಾರ್, ರಂಜಿತಾ ಸಾಯಿನಗರ, ಪ್ರಮೀಳಾ ಸಾಯಿನಗರ, ಅನಿತಾ, ಉದಯ ಶೆಟ್ಟಿ ಮಡ್ಯಾರ್ ಹಾಗೂ ಇನ್ನಿತರರು ಭಾಗವಹಿಸಿದ್ದರು.