Site icon Ullalavani

ಕಾಂಗ್ರೆಸ್ಸಿನದ್ದು ಭಾರತ್ ತೋಡೋ ಯಾತ್ರೆ : ಸಂತೋಷ್ ರೈ ಬೋಳಿಯಾರ್

UN NEWS NETWORKS
ಉಳ್ಳಾಲ: ಕಾಂಗ್ರೆಸ್ಸಿನವರದ್ದು ಜೋಡೋ ಭಾರತ್ತೋ, ಅಥವಾ ತೋಡೋ ಭಾರತ್ ಅನ್ನುವುದು ಗೊತ್ತಾಗುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಭಿವೃದ್ಧಿ ಪರ ಕೆಲಸಗಳಿಂದ ಜನತೆಗೆ ಉತ್ತಮ ಸಂದೇಶವನ್ನು ನೀಡುತ್ತಾ ಬಂದಿದೆ. ಬಿಜೆಪಿ ಹೇಳುವುದು ಮಾತ್ರವಲ್ಲ ಮಾಡಿ ತೋರಿಸುತ್ತದೆ ಇದಕ್ಕೆ ಪಂಡಿತ್ ಹೌಸಿನ ಶಿವಾಜಿನಗರದ ರಸ್ತೆಯೇ ಸಾಕ್ಷಿ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದ್ದಾರೆ.

ಶಿವಾಜಿನಗರ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಸಂತೋಷ್‌ ಬೋಳಿಯಾರ್‌ ಉದ್ಘಾಟಿಸಿದರು.

ಅವರು ಉಳ್ಳಾಲ ನಗರಸಭಾ ವ್ಯಾಪ್ತಿಯ ಪಂಡಿತ್ ಹೌಸ್ ಶಿವಾಜಿನಗರ ಹಾಗೂ ಪ್ರಕಾಶನಗರದಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರ ಅನುದಾನದಲ್ಲಿ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ವಾರದ ಹಿಂದೆ ರಸ್ತೆ ದುರಸ್ತಿಗೆ ಸ್ಥಳೀಯ ನಿವಾಸಿಗಳು ಮನವಿಯನ್ನು ಮಾಡಿದ್ದರು. ಅದರಂತೆ ಬಿಜೆಪಿ ಅಧ್ಯಕ್ಷರು ತಕ್ಷಣ ಸ್ಪಂಧಿಸಿ ರಸ್ತೆ ಕಾಂಕ್ರೀಟಿಕರಣದ ಅನುದಾನಕ್ಕೆ ಶ್ರಮವಹಿಸಿ ಸುಸಜ್ಜಿತ ರಸ್ತೆಯನ್ನು ನಿರ್ಮಿಸಿದ್ದಾರೆ. ಅಯೋಧ್ಯೆ ದೇವಸ್ಥಾನದ ನಿರ್ಮಾಣ ಕಾರ್ಯಗಳು ಭರದಿಂದ ನಡೆಯುತ್ತಿದೆ. ಬಿಜೆಪಿ ಹೇಳಿದ್ದನ್ನು ಮಾಡಿ ತೋರಿಸುತ್ತಿದೆ ಎಂದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಕಾರ‍್ಯದರ್ಶಿ ಸತೀಶ್ ಕುಂಪಲ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಅಲೆಮಾರಿ ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಕ್ಷೇತ್ರ ಪ್ರಧಾನ ಕರ‍್ಯದರ್ಶಿಗಳಾದ ನವೀನ್ ಪಾದಲ್ಪಾಡಿ, ರವಿಶಂಕರ್ ಸೋಮೇಶ್ವರ, ಯಶವಂತ್ ಮೊಗವೀರಪಟ್ನ, ಕೋಟೆಕಾರು ಪ.ಪಂ ಸದಸ್ಯ ಸುಜಿತ್ ಮಾಡೂರು, ಭರತ್ ಕಟ್ಟಪುಣಿ, ಸ್ಥಳೀಯ ಮಾಧವ ಮುಖಂಡರುಗಳಾದ ಜಿತೇಂದ್ರ ಶೆಟ್ಟಿ ತಲಪಾಡಿ, ಸುರೇಶ್ ಆಳ್ವ, ಭವಾನಿ, ಗಾಯತ್ರಿ, ಸ್ವಪ್ನಾ, ಸುಷ್ಮಾ, ಚರಣ್ , ಪುರುಷೋತ್ತಮ್ ಕಲ್ಲಾಪು ಮುಂತಾದವರು ಉಪಸ್ಥಿತರಿದ್ದರು.

Exit mobile version