UN networks
ಮಂಗಳೂರು: ಪಿಎಫ್ ಐ, ಸಿಎಫ್ ಐನ ಹಲವಾರು ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದ ಮಿತ್ತೂರಿನ ಫ್ರೀಡಂ ಕಮ್ಯೂನಿಟಿ ಹಾಲ್ ದೇಶ ವಿರೋಧಿ ಚಟುವಟಿಕೆಗಳ ಕೇಂದ್ರವಾಗಿದೆ ಎಂಬ ಆರೋಪವನ್ನು ಎನ್ ಎ ಐ ತನಿಖೆಯಲ್ಲಿ ಬಹಿರಂಗವಾಗಿದ್ದು ಆದಷ್ಟು ಬೇಗ ಇದನ್ನು ಸೀಜ್ ಮಾಡುವ ಸಾಧ್ಯ ತೆಯ ಬಗ್ಗೆ ಮಾಹಿತಿ ಲಭಿಸಿದೆ.
ಪಿಎಫ್ ಐ ನಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ವನಮಹೋತ್ಸವದಂಥ ಕಾರ್ಯಕ್ರಮ, ಸಿಎಫ್ ಐನಿಂದ ಮಕ್ಕಳ ಬೇಸಿಗೆ ಶಿಬಿರದ ಜೊತೆ ಹಲವಾರು ಕಾರ್ಯಕ್ರಮ ಈ ಸಭಾಂಗಣದಲ್ಲಿ ನಡೆಯುತ್ತಿದೆ ಅದರ ಜೊತೆಗೆ ಪಿಎಫ್ ಐನ ರಾಜ್ಯ ಸಮಾವೇಶಗಳು, ಜಿಲ್ಲಾ ಸಮಾವೇಶಗಳ ಆಯೋಜನೆಗಳು ನಡೆಯುತ್ತಿದ್ದವು.
ಆದರೆ ಇದೀಗ ಗೌಪ್ಯ ಸಭೆಗಳು, ತರಬೇತಿಗಳ ಮೂಲಕ ಸಮಾಜಘಾತುಕ ಚಟುವಟಿಕೆ, ದೇಶ ವಿರೋಧಿ ಚಟುವಟಿಕೆಗಳ ಅಡ್ಡೆಯಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಪಿಎಫ್ ಐ ಪ್ರಮುಖ ನಾಯಕರೇ ಟ್ರಸ್ಟಿಗಳಾಗಿದ್ದ ಈ ಕಮ್ಯೂನಿಟಿ ಹಾಲ್. 2017 ರಂದು ಕಲ್ಲಡ್ಕದಲ್ಲಿನಡೆದ ಗಲಭೆಗೂ ಕಮ್ಯೂನಿಟಿ ಹಾಲ್ ಗೂ ಲಿಂಕ್ ಇರುವ ಬಗ್ಗೆ ಪೊಲೀಸರು ಕಲೆ ಹಾಕುತ್ತಿದ್ದಾರೆ. ಅಂದು ಕಲ್ಲಡ್ಕದಲ್ಲಿ ನಡೆದ ಗಲಭೆಯ ಆರೋಪಿಗಳನ್ನು ಆಗಿನ ದ.ಕ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದು ಕಮ್ಯೂನಿಟಿ ಹಾಲ್ ನಿಂದಲೇ ಪೊಲೀಸರು ವಶಕ್ಕೆ ಪಡೆದಿದ್ದರು .
ಅದೇ ರೀತಿ ಶರತ್ ಮಡಿವಾಳ ಹಂತಕರು ಕೂಡ ಇಲ್ಲೇ ಟ್ರೈನಿಂಗ್ ಆಗಿದ್ದು ಇದೇ ಹಾಲ್ ನಲ್ಲಿ ಮೀಟಿಂಗ್ ಮಾಡಿ ಹತ್ಯೆಗೆ ಪ್ಲಾನ್ ಮಾಡಿದ್ದರು ಎಂಬ ಬಗ್ಗೆ ಸತ್ಯ ಎನ್ಐಎ ತನಿಖೆಯಲ್ಲಿ ಹೊರಬರುತ್ತಿದೆ.
