Site icon Ullalavani

ಪಿಎಫ್‌ಐ ನಿಷೇಧ ಹಿನ್ನೆಲೆ
ಮಂಗಳೂರು ವ್ಯಾಪ್ತಿಯ ೧೨ ಕಚೇರಿಗಳ ಸೀಝ್

UN networks

ಮಂಗಳೂರು: ದೇಶಾದ್ಯಂತ ಪಿಎಫ್ ಐ ಮತ್ತು ಅದರ ಉಪಸಂಘಟನೆಗಳು ಬ್ಯಾನ್ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಿತ ಸಂಘಟನೆಗಳ ೧೨ ಕಚೇರಿಗಳನ್ನು ಸೀಝ್ ಮಾಡಲಾಗಿದೆ.


೧೦ ಕಡೆ ಪಿಎಫ್ ಐ ಕಚೇರಿ, ಒಂದು ಸಿಎಫ್ ಐ ಹಾಗೂ ಎಂಪವರ್ ಇಂಡಿಯಾ ಕಚೇರಿಗಳನ್ನು ಇಂದು ಪೊಲೀಸರು ಸೀಝ್ ಮಾಡಿದ್ದಾರೆ. ನೆಲ್ಲಿಕಾಯಿ ರಸ್ತೆಯ ಪಿಎಫ್‌ಐ ಕೇಂದ್ರ ಕಚೇರಿ, ಚೊಕ್ಕಬೆಟ್ಟು, ಕಾಟಿಪಳ್ಳ, ಅಡ್ಡೂರು, ಕಿನ್ನಿಪದವು, ಕೆ.ಸಿ.ರೋಡ್, ಇನೋಳಿ, ಮಲ್ಲೂರು, ಕುದ್ರೋಳಿ, ಕಸಬಾ ಬೆಂಗ್ರೆ ಪಿಎಫ್‌ಐ ಕಚೇರಿಗಳನ್ನು ಹಾಗೂ ಅಜೀಜುದ್ದೀನ್ ರಸ್ತೆಯ ಸಿಎಫ್‌ಐ ಕಚೇರಿ ಮತ್ತು ರಾವ್ ಅಂಡ್ ರಾವ್ ವೃತ್ತದ ಬಳಿಯ ಎಂಪವರ್ ಇಂಡಿಯಾ ಕಚೇರಿಗಳನ್ನು ಸೀಝ್ ಮಾಡಲಾಗಿದೆ. ಕಚೇರಿಯೊಳಗಿದ್ದ ಎಲ್ಲಾ ವಸ್ತುಗಳನ್ನು ಸೀಝ್ ಮಾಡಿ ಬಳಿಕ ಕಚೇರಿಗಳಿಗೆ ಪೊಲೀಸರು ಬೀಗ ಹಾಕಿದ್ದಾರೆ.

Exit mobile version