Site icon Ullalavani

ಎನ್ ಐ ಎ ದಾಳಿ ಖಂಡಿಸಿ ತೊಕ್ಕೊಟ್ಟಿನಲ್ಲಿ ಇಂದು ಪ್ರತಿಭಟನೆ

UN networks

ತೊಕ್ಕೊಟ್ಟು: ಎಸ್ ಡಿ ಪಿ ಐ ಜಿಲ್ಲಾ ಕಚೇರಿಯಲ್ಲಿ ರಾಷ್ಟ್ರೀಯ ತನಿಖಾ ದಳ ನಡೆಸಿದ ಅತಿಕ್ರಮಣ ದಾಳಿಯನ್ನು ವಿರೋಧಿಸಿ ಹಾಗೂ ಪಿಎಫ್ಐ ಮುಖಂಡರ ಅಕ್ರಮ ಬಂಧನವನ್ನು ಖಂಡಿಸಿ ಎಸ್ ಡಿಪಿಐ ಹಾಗೂ ಪಿಎಫ್ ಐ ಕಾರ್ಯಕರ್ತರು ತೊಕ್ಕೊಟ್ಟು ಜಂಕ್ಷನಿನಲ್ಲಿ ಇಂದು ಸಂಜೆ 4 ಗಂಟೆಗೆ ಪ್ರತಿಭಟನೆಯನ್ನು ನಡೆಸಲಿದ್ದಾರೆ.

ಗುರುವಾರದಂದು ದೇಶದಾದ್ಯಂತ ಏಕಕಾಲಕ್ಕೆ ಎಸ್ ಡಿಪಿ ಐ ಹಾಗೂ ಪಿಎಫ್ ಐ ಮನೆ ಹಾಗೂ ಕಚೇರಿಗಳ ಮೇಲೆ ಎನ್ ಐಎ ದಾಳಿ ನಡೆಸಿ ದೇಶ ವಿರೋಧಿ ಚಟವಟಿಕೆಯ ಆರೋಪದ ಮೇಲೆ ಪಿಎಫ್ಐ ನಾಯಕರನ್ನು ಬಂಧಿಸಿತ್ತು. ಇದನ್ನು ಪಿಎಫ್ ಐ ಹಾಗೂ ಎಸ್ ಡಿಪಿ ಐ ತೀವ್ರವಾಗಿ ಖಂಡಿಸಿತ್ತು. ಈ ನಿಟ್ಟಿನಲ್ಲಿ ಇಂದು ಸಂಜೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್ ಡಿ ಪಿ ಐ ಮಾಧ್ಯಮ ಸಂಯೋಜಕ ಅಶ್ರಫ್ ಕೆ.ಸಿ ರೋಡ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Exit mobile version