Site icon Ullalavani

ಮಾರುತಿ ಯುವಕ ಮಂಡಲದಿಂದ ಪ್ರತಿಭಾ ಪುರಸ್ಕಾರ, ಸನ್ಮಾನ , ಮಾರುತಿ ಸಾಧಕ ಪ್ರಶಸ್ತಿ ಪ್ರಧಾನ

UN NEWS NETWORKS

ಉಳ್ಳಾಲದ ಮಾರುತಿ ಯುವಕ ಮಂಡಲ ಜನಪರ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದ್ದು, ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ.ವೃತ್ತಿ ಜೀವನದಲ್ಲಿ ಕೂಡಿಟ್ಟ ಭಾಗವನ್ನು ಸಮಾಜಕ್ಕೆ ಸಮರ್ಪಣೆ ನಡೆಸುತ್ತಿರುವ ಕಾರ್ಯ  ಶ್ಲಾಘನಾರ್ಹ.ರಾಜ್ಯ ಪ್ರಶಸ್ತಿಯನ್ನು ಪಡೆಯಲು ಅರ್ಹರಿರುವ ಸಂಸ್ಥೆ, ಎಂದು ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು.

ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೊಗವೀರಪಟ್ಣದ ಮಾರುತಿ ಯುವಕ ಮಂಡಲ ಮತ್ತು ಮಾರುತಿ ಕ್ರಿಕೆಟರ್ಸ್ ಇದರ ಆಶ್ರಯದಲ್ಲಿ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯ ಮಾರುತಿ ವೇದಿಕೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ, ಸನ್ಮಾನ , ಮಾರುತಿ ಸಾಧಕ ಪ್ರಶಸ್ತಿ ಪ್ರದಾನ ಹಾಗೂ ಗೌರವ ಧನ ಪ್ರದಾನ  ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ  ನವಮಂಗಳೂರು ಬಂದರಿನ ಟ್ರಸ್ಟಿ ಭರತ್ ಕುಮಾರ್ ಎರ್ಮಾಳ್, ಟ್ರಾಲ್‍ಬೋಟ್ ಯೂನಿಯನ್ ಅಧ್ಯಕ್ಷ ಚೇತನ್ ಬೆಂಗ್ರೆ, ಶ್ರೀ ವ್ಯಾಘ್ರಚಾಮುಂಡೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತ್ ಅಮೀನ್ ಗುರಿಕಾರ, ಉಳ್ಳಾಲ ನಗರಸಭಾ ಉಪಾಧ್ಯಕ್ಷ ಆಯ್ಯೂಬ್ ಮಂಚಿಲ, ಉಳ್ಳಾ ಮೊಗವಿಒರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಉಳ್ಳಾಲ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಯಶವಂತ ಅಮೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಸುನಿಲ್ ಕುಮಾರ್ ಮೋರ್ಗನ್ಸ್ ಗೇಟ್, ಸಮಾಜ ಸೇವಕ ರವಿ ಕಟಪಾಡಿ, ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕತ ಬಿ.ಇ ಎಂ ಶಾಲಾ ಮುಖ್ಯ ಶಿಕ್ಷಕಿ ಜಯವಂತಿ ಸೋನ್ಸ್, ಒಲಂಪಿಕ್ಸ್ ಯುನಿಫೈಡ್ ಪುಟ್ಬಾಲ್ ಆಟಗಾರ್ತಿ ಲಿಖಿತ ಹರೀಶ್ ಪುತ್ರನ್, ಡಾಕ್ಟರೇಟ್ ಪದವಿ ಪೂರೈಸಿದ ಡಾ| ಸುಮನ ಸುಧಾಕರ್ ಬೋಳಾರ್, ಡಾ| ರೇಷ್ಮಾ ಪ್ರಶಾಂತ್ ಉಳ್ಳಾಲ್ ಇವರಿಗೆ ಮಾರುತಿ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.   ಮಾರುತಿ ಯುವಕ ಮಂಡಲ ಮತ್ತು ಮಾರುತಿ ಕ್ರಿಕೆಟರ್ಸ್ ಅಧ್ಯಕ್ಷ ವರದರಾಜ್ ಬಂಗೇರ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ಕಪಿಲ್ ಬಂಗೇರ ಪ್ರಸ್ತಾವನೆಗೈದರು.ಸದಸ್ಯ ಪ್ರಶಾಂತ್ ಬಂಗೇರ ಸನ್ಮಾನಿತರ ವಿವರ ನೀಡಿದರು. ವಸಂತ್ ಸಾಲ್ಯಾನ್ ಬೈಕಂಪಾಡಿ,  ವಾಸುದೇವ ರಾವ್ ಮತ್ತು ಗೌರವಾಧ್ಯಕ್ಷ ಸುಧೀರ್ ಅಮೀನ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version