Site icon Ullalavani

ಉಳ್ಳಾಲ:ಬೆಳೆ ಸಮೀಕ್ಷೆ ಶೇ.100% ದಾಖಲು
ಖಾಸಗಿ ಪ್ರತಿನಿಧಿಗಳಿಗೆ ತಹಶೀಲ್ದಾರರಿಂದ ಸನ್ಮಾನ

UN networks

ಉಳ್ಳಾಲ: ಇಲ್ಲಿನ ತಾಲೂಕಿನ ವಿವಿದೆಡೆ ಬೆಳೆ ಸಮೀಕ್ಷೆ ಕಾರ್ಯದಲ್ಲಿ ಶೇ.100% ಪ್ರಗತಿ ಸಾಧಿಸಿದ ಖಾಸಗಿ ಪ್ರತಿನಿಧಿ(ಪಿ.ಆರ್) ಅವರನ್ನು ಕಂದಾಯ ಇಲಾಖೆ ವತಿಯಿಂದ ತಾಲೂಕು ತಹಶೀಲ್ದಾರ್ ಡಿ.ಎ ಪುಟ್ಟರಾಜು ನಾಟೆಕಲ್ ತಾಲೂಕು ಕಚೇರಿಯಲ್ಲಿ ಸನ್ಮಾನಿಸಿದರು.
ಕೊಣಾಜೆ ಗ್ರಾಮದ ಜಿತೇಂದ್ರ, ಕೈರಂಗಳ ಗ್ರಾಮದ ಮಹಮ್ಮದ್ ಮುನೀರ್ ಹಾಗೂ ಹೈದರ್ ಇಸ್ಮಾಯಿಲ್ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಪತಹಶೀಲ್ದಾರರಾದ ನವನೀತ್ ಮಾಳವ, ವಿನಯ ಎಸ್ ರಾವ್, ಕಂದಾಯ ನಿರೀಕ್ಷಕರಾದ ಮಂಜುನಾಥ್ ಕೆ ಹೆಚ್, ಪ್ರಥಮ ದರ್ಜೆ ಸಹಾಯಕರಾದ ಕಿರಣ್ ಕುಮಾರ್, ಗ್ರಾಮಕರಣಿಕರಾದ ತೌಫಿಕ್ ಹಾಗೂ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version