Site icon Ullalavani

ಮೀನಿನ ಲಾರಿಗೆ ಬೈಕ್ ಡಿಕ್ಕಿ: ಯುವಕ ಸಾವು

UN networks

ಉಳ್ಳಾಲ: ಮೀನಿನ ಲಾರಿ ಬೈಕ್ ನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕಾಸರಗೋಡು ನಿವಾಸಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು  ಕಾಸರಗೋಡು ಕುಂಬಳೆ ನಿವಾಸಿ ನಿತಿನ್ ಮಾನ್ಯ(22) ಎಂದು ಗುರುತಿಸಲಾಗಿದೆ.

ಮಂಗಳೂರು ಕಡೆಯಿಂದ ಕುಂಬಳೆ ಕಡೆಗೆ ಬೈಕಿನಲ್ಲಿ ತೆರಳುವ ಸಂದರ್ಭ , ಕುಂಪಲ ಬೈಪಾಸ್ ರಾ.ಹೆ.ಯಲ್ಲಿ ಇಡಲಾದ ಬ್ಯಾರಿಕೇಡ್ ತಪ್ಪಿಸುವ ವೇಳೆ ಹಿಂಬದಿಯಿಂದ ಮಲ್ಪೆಯಿಂದ ಕಾಸರಗೋಡಿನತ್ತ ತೆರಳುತ್ತಿದ್ದ ಮೀನಿನ ಲಾರಿ ಢಿಕ್ಕಿ ಹೊಡೆದು ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳದಲ್ಲಿದ್ದಾರೆ.

Exit mobile version