UN networks
ಉಳ್ಳಾಲ: ಅಧಿಕಾರಿಗಳಿಂದ ತೆರಿಗೆ ವಂಚನೆ ಆರೋಪದ ಹಿನ್ನಲೆಯಲ್ಲಿ ನಗರ ಸಭೆ ಸದಸ್ಯರೊಬ್ಬರು ಉಳ್ಳಾಲ ನಗರಸಭೆಯ ಅಧಿಕಾರಿಗಳ ವಿರುದ್ದ ಅರೆನಗ್ನ ರೂಪದಲ್ಲಿ ಪ್ರತಿಭಟನೆಯನ್ನು ಉಳ್ಳಾಲ ನಗರಸಭೆಯಲ್ಲಿ ನಡೆಸಿದ್ದಾರೆ.
ಉಳ್ಳಾಲ ನಗರಸಭೆಯ ಸದಸ್ಯ ರವಿಚಂದ್ರ ಗಟ್ಟಿ ಎಂಬವರು ಬಟ್ಟೆ ಬಿಚ್ಚಿ ನಗರಸಭೆಯಲ್ಲಿ ಮಲಗಿ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ್ದಾರೆ.
ನಗರಸಭೆ ಆಡಳಿತ ಪಕ್ಷ ಕಾಂಗ್ರೆಸ್ ನ ಸದಸ್ಯರಾಗಿರುವ ಇವರು ಜನರು ಕಟ್ಟಿದ ತೆರಿಗೆ ಹಣವನ್ನು ನಗರಸಭೆಗೆ ಪಾವತಿಸದೇ ಅಧಿಕಾರಿಗಳ ವಂಚನೆಯ ಆರೋಪದ ವಿರುದ್ದ ಪ್ರತಿಭಟಿನೆ ನಡೆಸಿದ್ದಾರೆ.
ತನ್ನ ಕ್ಷೇತ್ರಕ್ಕೆ ಅನುದಾನ ಮಂಜುರಾದರೂ ಕಾಮಗಾರಿ ವಿಳಂಬವಾಗಿದೆ. ಕಟ್ಟಡಗಳಿಗೆ ಡೋರ್ ನಂಬರ್ ನೀಡಲು ಅಧ್ಯಕ್ಷೆ ಚಿತ್ರಕಲಾ ಹಾಗೂ ಉಪಾಧ್ಯಕ್ಷ ಅಯೂಬ್ ಗೆ ಲಂಚ ಕೊಡಬೇಕು. ತೆರಿಗೆ ವಸೂಲಿಯಲ್ಲಿ ಅಧಿಕಾರಿಗಳಾದ ತುಳಸಿ, ಚಂದ್ರ ಮತ್ತು ಇತರರಿಂದ ವಂಚನೆಯಾಗಿದೆ ಎಂದು ಆರೋಪಿಸಿದ್ದು ನಗರಸಭೆಯ ಭ್ರಷ್ಟಾಚಾರದಿಂದ ಬೇಸತ್ತು ನಗರಸಭೆ ಸದಸ್ಯನ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.
