Site icon Ullalavani

ಹಿಂದೂ ಯುವತಿಯ ಮೈ ಮುಟ್ಟಿದ ಮುಸ್ಲಿಂ ಯುವಕನ ಬಂಧನ

UN networks

ಪುತ್ತೂರು: ಅನ್ಯಕೋಮಿನ ಯುವಕನೋರ್ವ ಹಿಂದೂ ಯುವತಿಯ ಮೈ ಮುಟ್ಟಿ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಬದ್ರುದ್ದೀನ್ ಎಂಬಾತನನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಸಂಜೆ ತಿಂಗಳಾಡಿಯ ಸೂಪರ್ ಬಜಾರ್ ಗೆ ಹಿಂದೂ ಯುವತಿ ಬಂದಿದ್ದು ಮಾಲೀಕ ಚಾ ಕುಡಿಯಲು ಹೋಗಿದ್ದ ವೇಳೆ ಬದ್ರುದ್ದೀನ್ ಎಂಬಾತನಿಂದ ಕಿರುಕುಳವಾಗಿದೆ ಈ ಸಂದರ್ಭದಲ್ಲಿ
ಮಹಿಳೆ ಬೊಬ್ಬೆ ಹಾಕಿದ ಕೂಡಲೇ ಬದ್ರುದ್ದೀನ್  ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಸಂಬಂಧ ಆರೋಪಿಯನ್ನು ಬಂಧಿಸುವಂತೆ ಹಿಂದೂ ಸಂಘಟನೆಗಳು ಗಡುವು ನೀಡಿದ್ದರು ಈ ಹಿನ್ನಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Exit mobile version