Site icon Ullalavani

ಕರಾವಳಿಯಲ್ಲಿ ಮತ್ತೆ ನಾರಾಯಣ ಗುರುಗಳ ಹೆಸರಿನಲ್ಲಿ ವಿವಾದ!

UN networks

ಮಂಗಳೂರು: ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಪ್ರತಿಪಾದಿಸಿದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರಗಳ ಹೆಸರಿನಲ್ಲಿ ಮತ್ತೆ ವಿವಾದವೊಂದು ಮಂಗಳೂರಿನಲ್ಲಿ ಶುರುವಾಗಿದೆ.

ಇಂದು ಸಂಜೆ ಮಂಗಳೂರಿನ ಟಿ.ಎಂ.ಎ ಪೈ ಸಭಾಂಗಣದಲ್ಲಿ ರಾಜ್ಯಮಟ್ಟದಲ್ಲಿ  ನಾರಾಯಣ ಗುರುಗಳ ಜಯಂತಿಯನ್ನು ಆಚರಿಸಲು ರಾಜ್ಯ ಸರ್ಕಾರ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ದ.ಕ ಜಿಲ್ಲಾಡಳಿತದಿಂದ‌ ವ್ಯವಸ್ಥೆ ಯಾಗಿದೆ ಆದರೆ ಈ ಕಾರ್ಯಕ್ರಮ ದ ವಿರುದ್ಧ ಕೆಲವೊಂದು ಬಿಲ್ಲವ ಮುಖಂಡರೇ ಅಸಮಾಧಾನ ವ್ಯಕ್ತಪಡಿಸಿದ್ದು ಆಶ್ಚರ್ಯ ಕ್ಕೆ ಕಾರಣವಾಗಿದೆ.

ತರಾತುರಿಯಲ್ಲಿ ಜಿಲ್ಲೆಯಲ್ಲಿ ಗುರುಗಳ ಜಯಂತಿ ಆಚರಣೆ ಮಾಡಲಾಗಿದ್ದು  ರಾಜಕೀಯ ಲಾಭಕ್ಕಾಗಿ ನಾರಾಯಣ ಗುರು ಜಯಂತಿ ಆಚರಣೆ ಮಾಡಲಾಗುತ್ತಿದೆ‌. ಈ ಮೂಲಕ ಬಿಜೆಪಿಯಿಂದ ವೋಟ್ ಬ್ಯಾಂಕ್ ರಾಜಕಾರಣ ಎಂಬ ಆರೋಪ ಕೇಳಿಬಂದಿದೆ.ಇದಕ್ಕೆ ವ್ಯತಿರಿಕ್ತ ಎಂಬಂತೆ ಬಿಲ್ಲವ ಮುಖಂಡರು, ಸಂಘಟನೆಗಳು ಹಾಗೂ ಸಾಮಾಜಿಕ ತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.ನಾಲ್ಕು ದಿನಗಳ ಹಿಂದಷ್ಟೇ ನಾರಾಯಣ ಗುರುಗಳ ಜಯಂತಿ ಆಚರಣೆ ಮಂಗಳೂರಿನಲ್ಲಿ ಆಚರಿಸುವ ಬಗ್ಗೆ  ಅಸಮಾಧಾನ ವ್ಯಕ್ತಪಡಿಸಲಾಗಿತ್ತು. ಈ ಬಾರಿ ವಿಧಾನಸೌಧದಲ್ಲೇ ನಾರಾಯಣ ಗುರುಗಳ ಜಯಂತಿ ಯನ್ನು ಆಚರಿಸುವುದು ಉತ್ತಮ ಇಲ್ಲವಾದಲ್ಲಿ  ಕುದ್ರೋಳಿ ದೇವಸ್ಥಾನದಲ್ಲಿ ಆಚರಿಸುವಂತೆ ಬಿಲ್ಲವ ಮುಖಂಡರು ಹಾಗೂ ಕೆಲವೊಂದು ಸಂಘಟನೆಗಳು ಆಗ್ರಹಿಸಿದ್ದರು.

ಇಂದು ಜಿಲ್ಲೆಯ ಹಲವೆಡೆ ನಾರಾಯಣ ಗುರು ಜಯಂತಿ ಆಚರಣೆಗೆ ತಯಾರಿ ನಡೆಸಲಾಗಿದ್ದು ಎಲ್ಲಾ ಸಿದ್ದತೆ ಮಧ್ಯೆಯೇ ಸರ್ಕಾರದಿಂದ ಜಯಂತಿ ಆಚರಣೆ ಘೋಷಣೆಗೆ ವಿರೋಧ ವ್ಯಕ್ತವಾಗಿದೆ. ಆದರೂ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಜಯಂತಿ ಆಚರಣೆಗೆ ಬಿಜೆಪಿವಮುಂದಾಗಿದೆ.‌ಸರ್ಕಾರದ ನೇತೃತ್ವದಲ್ಲೇ ಅಧಿಕೃತವಾಗಿ ಇಂದು ಜಿಲ್ಲೆಯಲ್ಲಿ ಜಯಂತಿ ಆಚರಣೆ ನಡೆಸಲಾಗುತ್ತಿದೆ. ಈ ಹಿಂದೆ ಟ್ಯಾಬ್ಲೋ ಮತ್ತು ಪಠ್ಯ ಪುಸ್ತಕ ವಿವಾದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ರಾಜ್ಯ ಮಟ್ಟದ ನಾರಾಯಣ ಗುರು ಜಯಂತಿ ಆಚರಣೆಯನ್ನು ಮಂಗಳೂರಿನಲ್ಲಿ ನಡೆಸುವ ಮೂಲಕ ಬಿಲ್ಲವ ಸಮುದಾಯವನ್ನು ಸೆಳೆಯಲು ಬಿಜೆಪಿ ಹೊಸ ತಂತ್ರವನ್ನು ಪ್ರಯೋಗಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

Exit mobile version