UN networks
ಮಂಗಳೂರು: ತುಂಬು ಗರ್ಭಿಣಿಗೆ ಸೀಮಂತ ಮಾಡುವುದು ಸಾಮಾನ್ಯ. ಆ ಹೊತ್ತಲ್ಲಿ ಹೆಣ್ಣಿನ ಬಯಕೆ ತೀರಿಸಿ ಖುಷಿ ಪಡಿಸೋದು ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಇಲ್ಲೊಬ್ಬರು ಸಾಕು ನಾಯಿಗೆ ಸೀಮಂತ ಮಾಡಿ ಸುದ್ದಿಯಾಗಿದ್ದು, ಸಾಮಾಜಿಕ ತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಸದ್ಯ ಸೀಮಂತದ ಫೋಟೋ, ವೀಡಿಯೋ ವ್ಯೆರಲ್ ಆಗಿದೆ. ಮಂಗಳೂರಿನ ಗುರುಪುರ ಕ್ಯೆಕಂಬದ ಮಂಜುಳಾ ಹಾಗೂ ಭಾಸ್ಕರ್ ಎಂಬುವವರ ಪುತ್ರಿ ಸುಶ್ಮಿತಾ ಸಾಲ್ಯಾನ್ ಎಂಬುವವರಿಗೆ ಸಾಕುಪ್ರಾಣಿ ಎಂದರೆ ತುಂಬಾ ಪ್ರೀತಿ. ತಮ್ಮ ಮನೆಯಲ್ಲಿ ಸಾಕಿದ್ದ ಒಂದೂವರೆ ವರ್ಷದ ಶಾಡೊ ಎಂಬ ಗರ್ಭಿಣಿ ನಾಯಿಗೆ ಹಸಿರು ಬಳೆ , ಹಸಿರು ಸೀರೆ , ಕುಂಕುಮ, ಅರಸಿನ ಹಚ್ಚಿ, ಆರತಿ ಬೆಳಗಿ ಸೀಮಂತ ಮಾಡಿದ್ದಾರೆ. ಶ್ವಾನಕ್ಕೆ ಅಚ್ಚುಮೆಚ್ಚಿನ ಹಣ್ಣು-ಹಂಪಲು, ಐಸ್ ಕ್ರಿಂ, ಸಿಹಿತಿನಿಸು ಕೂಡ ನೀಡಿದ್ದಾರೆ. ಸೀಮಂತ ನಡೆಯುವ ವೇಳೆ ಶ್ವಾನ ಶಾಂತತೆಯಿಂದ ಕುಳಿತಿರುವ ದೃಶ್ಯ ವ್ಯೆರಲ್ ಆಗಿದೆ. ಅಲ್ಲದೇ ಸೀಮಂತದ ಜೊತೆ ನಾಯಿಯ ಮೆಟರ್ನಿಟಿ ಶೂಟ್ ಕೂಡ ಮಾಡಲಾಗಿದ್ದು, ಈ ಮುದ್ದಾದ ಫೋಟೋಗಳು ವೈರಲ್ ಆಗಿದೆ.
