Site icon Ullalavani

ಉದ್ಯಮಿ ಬಿ.ಆರ್ ಶೆಟ್ಟಿ ವಿವಿಐಪಿ ಸೀಟಲ್ಲಿ ಕೂರಿಸಿದ ಚಿತ್ರ ವೈರಲ್!

Un networks

ಮಂಗಳೂರು: ಪ್ರಧಾನಿಯವರ ಕಾರ್ಯಕ್ರಮದಲ್ಲಿ ದುಬೈ ಉದ್ಯಮಿ ಬಿ.ಆರ್ ಶೆಟ್ಟಿ ಅವರಿಗೆ ಗೌರವ ತೋರಲಾಗಿಲ್ಲ, ಅನ್ನುವ ವಾಟ್ಸ್ ಆಪ್ ಸಂದೇಶಗಳು ಹರಿದಾಡುತ್ತಿದ್ದಂತೆ ಇದೀಗ ಅವರು ವಿವಿಐಪಿ ಸೀಟಿನಲ್ಲಿ ಕುಳಿತಿರುವ ಫೋಟೋ ಕೂಡ ವೈರಲ್ ಆಗಿದೆ.

ವಿವಿಐಪಿ ಸೀಟಿನಲ್ಲಿ ಕುಳಿತಿರುವ ಬಿ.ಆರ್.ಶೆಟ್ಟಿ
ಉದ್ಯಮಿ ಬಿ.ಆರ್ ಶೆಟ್ಟಿಯವರನ್ನು ಪೊಲೀಸರು ತಡೆಹಿಡಿದಾಗ

ಪಾಸು ಮರೆತು ಅಥವಾ ಬರುವುದು ತಡವಾದ ಹಿನ್ನೆಲೆಯಲ್ಲಿ ಒಳಗಡೆ ಬಿಡುವ ನಿಯಮವಿಲ್ಲ. ರಕ್ಷಣೆಗೆ ನಿಂತವರ ಪೈಕಿ ಹೊರಜಿಲ್ಲೆಯ ಪೊಲೀಸರೇ ಅನೇಕರಿದ್ದರು. ಹಾಗಾಗಿ ಬಿ.ಆರ್ ಶೆಟ್ಟಿಯವರ ಪರಿಚಯವಿಲ್ಲದವರೇ ಇರಬಹುದು. ಹೀಗಾಗಿ ಸುರಕ್ಷತಾ ದೃಷ್ಟಿಯಿಂದ ಕಾನೂನು ಪಾಲಿಸುವ ಉದ್ದೇಶದಿಂದ ಶೆಟ್ಟರ‌ನ್ನು ತಡೆಹಿಡಿಯಲಾಗಿತ್ತು. ಆದರೆ ಇದೇ ವಿಚಾರವನ್ನು ಮುಂದಿಟ್ಟು ಹಲವರು’ ಹಣವಿದ್ದಾಗ ದುಬೈಗೆ ಮೋದಿಯನ್ನೇ ಕರೆಸಿದ್ಸ ಉದ್ಯಮಿಯನ್ನೇ ಮರೆತರು’ . ಬೆಳವಣಿಗೆಗೆ ಸಹಕರಿಸಿ ದವರನ್ನೇ ಮರೆತೇ ಬಿಡುವ ಪಕ್ಷ’ ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯನ್ನು ಹಂಚಲಾಗಿತ್ತು. ಇದಕ್ಕೆ ಪರ್ಯಾಯ ವಾಗಿ ಇದೀಗ ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ ಇಂತಹ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

Exit mobile version