Site icon Ullalavani

ಮಂಗಳೂರು: ₹3,700 ಕೋಟಿ ಯೋಜನೆ ಪ್ರಧಾನಿ ಮೋದಿ ಚಾಲನೆ

Un networks

ಮಂಗಳೂರು: ಸುಮಾರು 3700  ಕೋಟಿ ವೆಚ್ಚದ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದು
ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಸೇರಲಿರುವ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ ಎಂದು ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ

ಮಂಗಳೂರಿನಲ್ಲಿ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಮಡೆಯಲಿರುವ ಮೋದಿ ಸಮಾವೇಶದ ಸ್ಥಳಕ್ಕೆ ಭೇಟಿ ಪರಿಶೀಲಿಸಿ ಅವರು ಮಾತನಾಡಿದರು

ಮೋದಿ ಭೇಟಿ ಹಿನ್ನೆಲೆಯಲ್ಲಿ ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾದ ರೀತಿಯಲ್ಲಿ ಜಿಲ್ಲಾಡಳಿತ ಮಾಡಿಕೊಂಡಿದೆ. ಎರಡೂ‌ ಜಿಲ್ಲೆಯ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಇರಲಿದ್ದು ಅವರನ್ನು ಕರೆತರಲು ಎರಡು ಸಾವಿರ ಬಸ್ ವ್ಯವಸ್ಥೆ ‌ಮಾಡಲಾಗಿದೆ. ಕೃಷಿ ಸಮ್ಮಾನ್, ವಿದ್ಯಾನಿಧಿ ಸೇರಿ ಹಲವು ಫಲಾನುಭವಿಗಳು ಇಲ್ಲಿಗೆ ಬರತ್ತಾರೆ
ಎಲ್ಲರೂ ಮಧ್ಯಾಹ್ನ 12 ಗಂಟೆ ಒಳಗೆ ಮೈದಾನದ ಒಳಗೆ ಇರಬೇಕು ಎಂದರು.

Exit mobile version