Site icon Ullalavani

ಕಾಸರಗೋಡು: ರೈಲು ಹಳಿ ತಪ್ಪಿಸಲು ಯತ್ನ: ಮಹಿಳೆ ಅರೆಸ್ಟ್!

ಉಳ್ಳಾಲ ನ್ಯೂಸ್. ಕಾಂ followup ಸ್ಟೋರಿ

UN networks

ಕಾಸರಗೋಡು: ಕೆಲವು ದಿನಗಳ ಹಿಂದೆ ಕಾಸರಗೋಡಿನಲ್ಲಿ ರೈಲು ಹಳಿ ತಪ್ಪಿಸಲು ಯತ್ನಿಸಿದ  ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ಮಹಿಳೆಯನ್ನು   ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ನಿವಾಸಿ ಹಾಗೂ ಕಾಸರಗೋಡಿನ ಕೋಟಿಕುಳಂನಲ್ಲಿ ವಾಸಿಸುವ ಕನಕವಲ್ಲಿ (22) ಬಂಧಿತ ಆರೋಪಿಯಾಗಿದ್ದಾರೆ.

https://bit.ly/3QR2Rtp

ಕಾಸರಗೋಡು ಬಳಿ ರೈಲು ಹಳಿಯಲ್ಲಿ ಕಬ್ಬಿಣದ ಸಲಾಕೆ ಇರಿಸಿದ್ದ ಶಂಕೆಯ ಹಿನ್ನೆಲೆಯಲ್ಲಿ ಈಕೆಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಶ್ನಿಸಿದಾಗ ವಿಚಾರ ಬಹಿರಂಗವಾಗಿದ್ದು ದೊಡ್ಡ ಕಬ್ಬಿಣದ ತುಂಡನ್ನು ಎರಡು ತುಂಡು ಮಾಡಲು ರೈಲಿನ ಹಳಿಗೆ ಇಟ್ಟಿದ್ದು  ಕಬ್ಬಿಣ ಮಾರಾಟ ಮಾಡಿ ಹಣ ಪಡೆಯುವ ಆಸೆಗೆ
ಕಬ್ಬಿಣದ ಸಲಾಕೆ ಇರಿಸಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾಳೆ.ಬಂಧಿತ ಮಹಿಳೆ ಗುಜರಿ ಹೆಕ್ಕಿ ಜೀವನ ನಡೆಸುತ್ತಿದ್ದಳು ಎನ್ನಲಾಗಿದೆ.

10 ದಿನಗಳ ಹಿಂದೆ ಬೇಕಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕೋಟಿಕುಳಂನಲ್ಲಿ ರೈಲು ಹಳಿಯಲ್ಲಿ ಕಬ್ಬಿಣದ ಸಲಾಕೆ ಕಂಡು ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಪೊಲೀಸರು ಹಾಗೂ ಆರ್.ಪಿ.ಎಫ್.ತಂಡ ತನಿಖೆ ಚುರುಕುಗೊಳಿಸಿತ್ತು. ಅದೇ ದಿನ ತಳಂಗರೆ, ಕೀಯೂರು, ಕುಂಬಳೆ ಎಂಬಲ್ಲಿ ರೈಲಿನ ಮೇಲೆ ಕಲ್ಲೆಸೆತ ಉಂಟಾಗಿತ್ತು.

Exit mobile version