Site icon Ullalavani

ಮೋದಿ ಭೇಟಿ ಹಿನ್ನೆಲೆ ನಂತೂರು-ಸುರತ್ಕಲ್‌ ವಾಹನ ಸಂಚಾರ ಬಂದ್

UN networks

ಮಂಗಳೂರು: ಸೆ.2ರಂದು‌ ಮಧ್ಯಾಹ್ನದ ಹೊತ್ತಿಗೆ‌ ಪ್ರಧಾನಿಗಳು ಮಂಗಳೂರಿಗೆ‌ ಬರ್ತಾರೆ , ಪ್ರಧಾನಿಯವರ ಚಲನವಲನದ ಎಲ್ಲಾ ಜಾಗಗಳಲ್ಲೂ ಬಿಗು ಭದ್ರತೆ ಮಾಡಲಾಗಿದೆ. ನಂತೂರಿನಿಂದ ಸುರತ್ಕಲ್ ವರೆಗೆ ವಾಹನ ಸಂಚಾರ ಬಂದ್ ಮಾಡ್ತೇವೆ. ಸಮಾವೇಶಕ್ಕೆ ಬರುವ ವಾಹನಗಳ ನಿಲುಗಡೆಗೆ 15 ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್‌ ಕಮೀಷನರ್‌ ಶಶಿಕುಮಾರ್‌ ತಿಳಿಸಿದರು.
ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮ‌ನ ಹಿನ್ನೆಲೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೋದಿ ಕಾರ್ಯಕ್ರಮ ಮುಗಿದು ಜನ ಹೋದ ಬಳಿಕ ಗಣೇಶ ವಿಸರ್ಜನೆ ಮಾಡಲು ಸೂಚಿಸಿದ್ದೇವೆ.  ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲೇ ಸಮಾವೇಶ ‌ನಡೆಯುವ ಕಾರಣ ಟ್ರಾಫಿಕ್ ಬದಲಾವಣೆ ಇರುತ್ತೆ. ನಂತೂರು-ಬಿಕರ್ನಕಟ್ಟೆ-ಕುಲಶೇಖರ, ವಾಮಂಜೂರು, ಕೈಕಂಬ, ಪೊರ್ಕೊಡಿ, ಮುಲ್ಕಿ ಭಾಗವಾಗಿ ವಾಹನ ಸಂಚಾರ ಬದಲಾವಣೆಯನ್ನು ಮಾಡಲಾಗಿದೆ.  ನಂತೂರಿನಿಂದ ಸುರತ್ಕಲ್ ವರೆಗೆ ವಾಹನ ಸಂಚಾರ ಬಂದ್ ಮಾಡ್ತೇವೆ. ಸಮಾವೇಶಕ್ಕೆ ಬರುವ ವಾಹನಗಳ ನಿಲುಗಡೆಗೆ 15 ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ
ಉಡುಪಿ ಭಾಗದ ಲಾರಿ, ಟ್ಯಾಂಕರ್ ಗಳನ್ನು ಪಡುಬಿದ್ರೆ ಭಾಗದಿಂದಲೇ ಡೈವರ್ಟ್ ಮಾಡ್ತೇವೆ.  ಉಳಿದ ವಾಹನಗಳನ್ನು‌ ಮುಲ್ಕಿ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಒಟ್ಟು 9 ಕಡೆಗಳಲ್ಲಿ ಟ್ರಾಫಿಕ್ ಡೈವರ್ಟ್ ಮಾಡಲಿದ್ದೇವೆ. ಕೂಳೂರಿನಿಂದ ಕೆಪಿಟಿ ಸರ್ಕಲ್ ವರೆಗಿನ ರಾಷ್ಟ್ರೀಯ ‌ಹೆದ್ದಾರಿ ಝೀರೋ ಟ್ರಾಫಿಕ್ ಮಾಡ್ತೇವೆ. 11 ರಿಂದ 12 ಗಂಟೆಗೆ ಒಳಗಡೆ ಎಲ್ಲರೂ ಸಮಾವೇಶಕ್ಕೆ ಬಂದು ಸೇರಬೇಕು. ಯಾವುದೇ ಆಯುಧ ಅಥವಾ ಆಕ್ಷೇಪಾರ್ಹ ವಸ್ತುಗಳನ್ನು ಸಮಾವೇಶದ ಸ್ಥಳಕ್ಕೆ ತರಬಾರದು. ಜನ ಸೇರುವ ಕಾರಣ ಬಂದೋಬಸ್ತ್ ‌ಹೆಚ್ಚಿಸಲಾಗಿದೆ, ಗಣೇಶೋತ್ಸವ ಇರುವ ಕಾರಣ ಆಯೋಜಕರ ಜೊತೆ ಚರ್ಚಿಸಿದ್ದೇವೆ ಎಂದಿದ್ದಾರೆ.

Exit mobile version