Site icon Ullalavani

ಮೋದಿ ಕಾರ್ಯಕ್ರಮದಲ್ಲಿ ಗೊಂದಲಕ್ಕೆ ಯತ್ನ ಮಂಗಳೂರು ಕಮೀಷನರೇಟ್‌ ವ್ಯಾಪ್ತಿಯಲ್ಲಿ ಎರಡು ಎಫ್‌ ಐ ಆರ್‌ ದಾಖಲು

UN networks

ಮಂಗಳೂರು: ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸಿದ ಸಂಬಂಧ ಮಂಗಳೂರು ಕಮೀಷನರೇಟ್‌ ವ್ಯಾಪ್ತಿಯಲ್ಲಿ ಎರಡು ಎಫ್ ಐಆರ್‌ ದಾಖಲಾಗಿದೆ.
ಪ್ರಕರಣ ಸಂಬಂಧ ಮಂಗಳೂರು ಕಮಿಷನರ್ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.
ಫೋಟೋ ಮಾರ್ಪ್ ಮಾಡಿ ಆಕ್ಷೇಪಾರ್ಹ ಹಂಚಿಕೆ , ಮೋದಿ ಕಾರ್ಯಕ್ರಮದಲ್ಲಿ ಗೊಂದಲ ಉಂಟುಮಾಡಲು ಸರ್ಕ್ಯೂಲೇಟ್ ಆಗ್ತಿದ್ದ ಪೋಸ್ಟ್ ಬಗ್ಗೆಯೂ ಪ್ರಕರಣ ದಾಖಲಾಗಿದೆ.  ಕೆಲವು ವಾಟ್ಸಪ್ ಗ್ರೂಪ್ ಗಳಲ್ಲಿ ಗೊಂದಲ ನಿರ್ಮಿಸುವ ಕೆಲಸ ಆಗ್ತಿದೆ.  ಈ ಎಲ್ಲಾ ಗ್ರೂಪ್ ಗಳ ಪ್ರತಿಯೊಂದು ಚಟುವಟಿಕೆಗಳನ್ನು ಮಾನಿಟರ್ ಮಾಡಲಾಗ್ತಿದೆ.  ಎಲ್ಲಿ ಅಪರಾಧ ಅನಿಸುತ್ತೋ ಆಗ ಪ್ರಕರಣ ದಾಖಲಿಸ್ತೇವೆ.  ಅಪರಾಧ ಅನಿಸದೇ ಗೊಂದಲ ಅನಿಸಿದ್ರೆ ಸಿಆರ್ ಪಿಸಿ 107, 110 ಅಡಿಯಲ್ಲಿ ಕಾನೂನು ಕ್ರಮ ಕಗೊಳ್ಳಲಾಗುವುದು. ಲಕ್ಷ ರೂ. ಶೂರಿಟಿ ಬಾಂಡ್ ಪಡೆದು ಅವರಿಂದ ಮುಚ್ಚಳಿಕೆ ಪಡೆದಿದ್ದೇವೆ. ಕೆಲವರನ್ನು ವಶಕ್ಕೆ ಪಡೆಯುವ ಪ್ರಯತ್ನವೂ ಆಗಿದೆ
ಆದರೆ ಕೆಲವರು ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ತಲೆ ಮರೆಸಿಕೊಂಡಿದ್ದಾರೆ. ಇಂಥವರನ್ನ ವಶಕ್ಕೆ ಪಡೆದು ನಾವು ಪ್ರಕರಣ ದಾಖಲಿಸ್ತೇವೆ.ಮೋದಿಯವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗೊಂದಲ ನಿರ್ಮಿಸುವ ಪ್ರಯತ್ನದ ಬಗ್ಗೆ ಕೇಸ್ ದಾಖಲಾಗಿದೆ

Exit mobile version