UN networks
ಮಂಗಳೂರು: ತುಳು ಭಾಷೆಗೆ ರಾಜ್ಯಭಾಷೆ ಸ್ಥಾನಮಾನ ನೀಡಲು ಒತ್ತಾಯಿಸಿ ಮೂರು ದಿನಗಳ ಕಾಲ ಟ್ವೀಟ್ ತುಳುನಾಡ್ ಅಭಿಯಾನಕ್ಕೆ ನಿರ್ಧರಿಸಲಾಗಿದ್ದು ಮೋದಿ ಮಂಗಳೂರಿಗೆ ಆಗಮನ ಹಿನ್ನೆಲೆಯಲ್ಲಿ ತುಳುನಾಡಿನ ವಿವಿಧ ತುಳು ಸಂಘಟನೆಗಳಿಂದ ಟ್ವಿಟ್ ಅಭಿಯಾನ ನಡೆಯಲಿದೆ.
ಅಗಸ್ಟ್ 30, 31 ಮತ್ತು ಸೆ.1 ರಂದು ಜೈ ತುಳುನಾಡು ಮತ್ತು ವಿವಿಧ ತುಳು ಸಂಘಟನೆಗಳಿಂದ ಟ್ವಿಟರ್ ಮೂಲಕ ಅಭಿಯಾನ ನಡೆಯಲಿದ್ದು ಸೆ.2ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಒತ್ತಾಯಿಸಿ ಕರಾವಳಿ ಭಾಗದ ತುಳುವರಿಂದ ಪ್ರಧಾನಿ ಮೋದಿಗೆ ಟ್ವೀಟ್ ಅಭಿಯಾನ ಕೈಗೊಳ್ಳಲಾಗಿದೆ.
