Site icon Ullalavani

ಮಂಗಳೂರು ಮೋದಿ ಭೇಟಿ ಸಮಯ ಬದಲಾವಣೆ

UN network’s

ಮಂಗಳೂರು: ಸೆಪ್ಟೆಂಬರ್ 2ರಂದು ಮಂಗಳೂರಿನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದ ಸಮಯ ಬದಲಾವಣೆಯಾಗಿದ್ದು  ಮಧ್ಯಾಹ್ನ 1 ಗಂಟೆಗೆ ಸುಮಾರಿಗೆ ಮೋದಿ  ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ‌.

ಕೊಚ್ಚಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ಏರ್ಪೋರ್ಟ್ ಗೆ ಆಗಮಿಸಲಿದ್ದು
ಏರ್ ಪೋರ್ಟ್ ನಿಂದ ಹೆಲಿಕಾಪ್ಟರ್ ಮೂಲಕ ಮಂಗಳೂರು ಬಂದರಿನ ಹೆಲಿಪ್ಯಾಡ್ ನಲ್ಲಿ‌ ಲ್ಯಾಂಡಿಂಗ್ ಆಗಲಿದೆ.‌ಬಳಿಕ ಕೂಳೂರಿನ ಗೋಲ್ಡ್ ಪಿಂಚ್ ಮೈದಾನಕ್ಕೆ ರಸ್ತೆ ‌ಮೂಲಕ ಬಂದಿಳಿಯಲಿದ್ದಾರೆ.

ಮಧ್ಯಾಹ್ನ 1.30ರಿಂದ 2.30ರ ವರೆಗೆ ಸಮಾವೇಶದಲ್ಲಿ ಮೋದಿ ‌ಭಾಗಿಯಾಗಿ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಮಂಗಳೂರಿನಿಂದ ಮೋದಿ ವಾಪಾಸು ಆಗಲಿದ್ದಾರೆ

ನವಮಂಗಳೂರು ಬಂದರು ಹಾಗೂ ಇತರೆ 3 ಸಾವಿರ ಕೋಟಿ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ ಈ ಮೊದಲು ಸಂಜೆ 4 ಗಂಟೆಗೆ ನಿಗದಿಯಾಗಿದ್ದ ಮೋದಿ ಕಾರ್ಯಕ್ರಮದಲ್ಲಿ ಇದೀಗ ಬದಲಾವಣೆಯಾಗಿದೆ.

Exit mobile version