Site icon Ullalavani

ಉಳ್ಳಾಲ ತಾಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕೆ
ರಾಜ್ಯ ಸರಕಾರದಿಂದ ರೂ.೧೦ ಕೋಟಿ ಬಿಡುಗಡೆ: ಯು.ಟಿ ಖಾದರ್

UN NEWS NETWORKS
ಉಳ್ಳಾಲ: ಉಳ್ಳಾಲ ತಾಲೂಕು ಕಚೇರಿ ಮತ್ತು ಕಂದಾಯ ಇಲಾಖೆ ಕಟ್ಟಡ ನಿರ್ಮಾಣಕ್ಕೆ 10 ಕೋಟಿ ರೂ ರಾಜ್ಯ ಸರಕಾರ ಬಿಡುಗಡೆ ಮಾಡಿದ್ದು, ಸೂಕ್ತ ಸ್ಥಳ ಪರಿಶೀಲನೆ ಕಾರ್ಯ ಅಂತಿಮ ಹಂತದಲ್ಲಿದ್ದು ಜನರಿಗೆ ತಾಲೂಕಿನ ಎಲ್ಲಾ ಗ್ರಾಮಗಳ ಜನರಿಗೆ ಪೂರಕವಾಗುವ ಪ್ರದೇಶದಲ್ಲಿ ಶೀಘ್ರದಲ್ಲೇ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದ್ದು, ಇದರ ಪೂರ್ವಭಾವಿಯಾಗಿ ಉಳ್ಳಾಲ ತಾಲೂಕು ಆಡಳಿತ ಕಚೇರಿಯನ್ನು ಬೆಳ್ಮ ಗ್ರಾಮಪಂಚಾಯತ್ ಕಟ್ಟಡದಲ್ಲಿ ಆರಂಭಿಸಿದ್ದು ಒಂದು ವಾರದೊಳಗೆ ಕಾರ್ಯ ಆರಂಭಗೊಳ್ಳಲಿದ್ದು, ಪ್ರತೀ ಗ್ರಾಮದಲ್ಲಿ ಶಾಂತಿ ಸಾಮರಸ್ಯದೊಂದಿಗೆ ಅಭಿವೃದ್ಧಿಗೆ ಆದ್ಯತೆ ನೀಡಿ ಮಾದರಿ ಉಳ್ಳಾಲ ತಾಲೂಕು ರಚನೆಗೆ ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಹಾಗೂ ವಿಧಾನಸಭಾ ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್ ತಿಳಿಸಿದರು.

ಬೆಳ್ಮ ಗ್ರಾಮ ಪಂಚಾಯತ್‌ ಕಟ್ಟಡದಲ್ಲಿ ಉಳ್ಳಾಲ ತಾಲೂಕು ಕಾರ್ಯಾಲಯ ಉದ್ಘಾಟಿಸಿ ಶಾಸಕ ಯು.,ಟಿ ಖಾದರ್‌ ಮಾತನಾಡಿದರು

ದೇರಳಕಟ್ಟೆಯಲ್ಲಿರುವ ಬೆಳ್ಮ ಗ್ರಾಮ ಪಂಚಾಯತ್‍ನ ಕಟ್ಟಡದಲ್ಲಿ ನೂತನ ಉಳ್ಳಾಲ ತಾಲೂಕು ಪಂಚಾಯತ್ ಆಡಳಿತ ಕಾರ್ಯಾಲಯ ಉದ್ಘಾಟಿಸಿ ಪ್ರಥಮ ಕಾರ್ಯಯೋಜನೆಯ ಸಭೆಯನ್ನು ಉದ್ಧೇಶಿಸಿ ಮಾತನಾಡಿ ಗ್ರಾಮಗಳ ಅಭಿವೃದ್ಧಿ ಮತ್ತು ಜನರ ಕೆಲಸಗಳು ತ್ವರಿತಗತಿಯಲ್ಲಿ ನಡೆಸಲು ಪೂರಕವಾಗಿ ಕಾರ್ಯಾಲಯವನ್ನು ಆರಂಭಿಸಲಾಗಿದೆ. ತಾಲೂಕು ಆರಂಭದ ಸಂದರ್ಭದಲ್ಲೂ ಯಾವುದೇ ಮನವಿ ಇಲ್ಲದೆ, ಸರಕಾರಕ್ಕೆ ಜಿಲ್ಲೆಯಿಂದ ಅರ್ಜಿ ಸಲ್ಲಿಸದೆ ಕೇವಲ ಬಜೆಟ್ ಸಂದರ್ಭದಲ್ಲಿ ಮಾಡಿದ ಮನವಿಗೆ ಸ್ಪಂದಿಸಿ ತಾಲೂಕು ಸ್ಥಾಪನೆಗೆ ಅನುಮೋದನೆ ಸಿಕ್ಕಿತ್ತು. ಹೊಸ ತಾಲೂಕು ಸ್ಥಾಪನೆಯಿಂದ ತಾಲೂಕಿಗೆ ಬರುವ ಅನುದಾನವನ್ನು ಈ ವ್ಯಾಪತಿಯ ಗ್ರಾಮಗಳಿಗೆ ವಿನಿಯೋಗಿಸಲು ಸಹಕಾರಿಯಾಗಲಿದ್ದು, ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದ್ದು ಶೀಘ್ರವೇ ಬಾಕಿ ಉಳಿದಿರುವ ರಸ್ತೆಗಳಿಗೆ ಅನುದಾನ ಮಂಜೂರು ಮಾಡಲಾಗಿದೆ. ಈ ತಾಲೂಕು ರಾಕ್ಯ ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ನಿಟ್ಟಿನಲ್ಲಿ ಪ್ರತೀ ಗ್ರಾಮದ ಅಭಿವೃದ್ಧಿ ಅ„ಕಾರಿಗಳು, ಗ್ರಾಮ ಪಂಚಾಯತ್ ಸಿಬಂದಿಗಳು, ಜನಪ್ರತಿನಿಧಿಗಳು, ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಗಳಲ್ಲಿ ಶಾಂತಿಸಾಮರಸ್ಯ ಕಾಪಾಡುವುದರೊಂದಿಗೆ ಗ್ರಾಮದ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಕಾರ್ಯ ಮಾಡಬೇಕು ಎಂದರು.
ಉಳ್ಳಾಲ ತಾಲೂಕು ಪ್ರಭಾರ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಮಾತನಾಡಿ ಆರ್ಥಿಕ ವರ್ಷದ ನಡುವೆ ತಾಲೂಕು ಘೋಷಣೆ ಮತ್ತು ಕಾರ್ಯಾರಂಭ ಮಾಡಿದ್ದರಿಂದ ಕೆಲವೊಂದು ಪತ್ರ ವ್ಯವಹಾರಗಳು, ಅನುಮೋದನೆಗಳು ಹಂತ ಹಂತವಾಗಿ ನಡೆಸಿ ನೂತನ ತಾಲೂಕು ಸಂಪೂರ್ಣವಾಗಿ ಕಾರ್ಯಾರಂಭ ನಡೆಸಲು ವ್ಯವಸ್ಥೆ ಮಾಡಿದ್ದು, ನೂತನಮ ಕಚೇರಿ ಸ್ಥಾಪನೆಯಿಂದ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದ್ದು ತಾಲೂಕಿನ ಕಾರ್ಯಗಳು ತ್ವರಿತಗತಿಯಲ್ಲಿನಡೆಯಲು ಸಹಾಯವಾಗಲಿದೆ ಎಂದರು.
ಉಳ್ಳಾಲ ತಾಲೂಕು ಉಪತಹಶೀಲ್ದಾರ್ ನವನೀತ್ ಮಾಳವ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಬಂಟ್ವಾಳ ತಾಲೂಕು ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಸತ್ತಾರ್, ಉಪಾಧ್ಯಕ್ಷೆ ರಮ್ಲತ್, ಹರೇಕಳ ಪಂಚಾಯತ್ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ, ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಲ್ಪ್ರೆಡ್ ಡಿ,ಸೋಜ, ಕುರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ನಾೈಕ್, ಬೋಳಿಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೆಸಿಂತಾ ಡಿ.ಸೋಜ, ಪಾವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನ್ಸಾರ್ ಇನೋಳಿ , ಬೆಳ್ಮ ಗ್ರಾಮ ಪಂಚಾಯತ್ ಸದಸ್ಯರಾದ ಅಲಿಮಮ್ಮ, ಪುಷ್ಪ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹರೇಕಳ ಗ್ರಾಮ ಪಂಚಾಯತ್‍ಗೆ ತಾಲೂಕು ಕಚೇರಿಯಿಂದ ನೀಡಲಾದ ಕಂಪ್ಯೂಟರ್ ಹಸ್ತಾಂತರ ಕಾರ್ಯ ನಡೆಯಿತು.
ಬೆಳ್ಮ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ನಾಯ್ಕ್ ಸ್ವಾಗಸಿದರು. ಕಿನ್ಯಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಬೈಲಮೂಲೆ ಕಾರ್ಯಕ್ರಮ ನಿರ್ವಹಿಸಿದರು.

Exit mobile version