Site icon Ullalavani

ಕುತ್ತಾರು ಏಳ್ವೆರ್ ಸಿರಿ, ಕೊರಗಜ್ಜ ಕ್ಷೇತ್ರಕ್ಕೆ ಸ್ಯಾಂಡಲ್ ವುಡ್ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಭೇಟಿ

UN networks

ಉಳ್ಳಾಲ: ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಶುಕ್ರವಾರ ಬೆಳಗ್ಗೆ  ಕುತ್ತಾರಿನ ಆದಿಸ್ಥಳ ಶ್ರೀ ರಕ್ತೇಶ್ವರಿ, ಬೆರ್ಮೆರ್, ಏಳ್ವೆರ್ ಸಿರಿಗಳು, ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.


ಕರಾವಳಿಯಲ್ಲಿ ಕೊರಗಜ್ಜ ದೈವ ಬಹಳ ಕಾರಣೀಕ ಶಕ್ತಿಯಾಗಿದ್ದು  ದೇಶದ ನಾನಾ ಕಡೆಯ ಭಕ್ತರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಇಷ್ಟಾರ್ಥಗಳನ್ನು ನೆರವೇರಿಸುವಂತೆ  ಬೇಡಿಕೊಂಡು ಹರಕೆ ಹೊರುತ್ತಾರೆ.
ಕೊರಗಜ್ಜನ ದರ್ಶನ ಮಾಡುವ ಅಭಿಲಾಷೆಯಿಂದ ಅರ್ಜುನ್ ಜನ್ಯ ಅವರು ಬಂದಿರೋದಾಗಿ ಕ್ಷೇತ್ರದ ಮುಖ್ಯಸ್ಥರು ತಿಳಿಸಿದ್ದಾರೆ.

Exit mobile version