Site icon Ullalavani

ಪೂತ್ತೂರಿನಲ್ಲಿ ಇಂದಿನಿಂದ ನಡೆಯಲಿರುವ ಆರ್ ಎಸ್ ಎಸ್ ಬೈಠಕ್

Un networks

ಪೂತ್ತೂರು: ಇಂದಿನಿಂದ ಮೂರು ದಿನಗಳ ಕಾಲ ಪುತ್ತೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಆರ್.ಎಸ್.ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್ ನಡೆಯಲಿದೆ. ಆರ್​.ಎಸ್.ಎಸ್​​ ಸಹ ಸರಕಾರ್ಯವಾಹಕ ಮುಕುಂದ್‌ ಜೀ ನೇತೃತ್ವದಲ್ಲಿ ಸಂಘದ ಪ್ರಮುಖರ ಜೊತೆ ನಡೆಯಲಿರುವ ಮಹತ್ವದ ಬೈಠಕ್ ಇದಾಗಿದೆ.

ಕ್ಷೇತ್ರೀಯ ಸಂಘ ಚಾಲಕ ವಿ.ನಾಗರಾಜ್, ಕ್ಷೇತ್ರೀಯ ಪ್ರಚಾರಕ ಸುಧೀರ್‌, ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಸೇರಿ‌ ಸಂಘದ ಪ್ರಮುಖರು ಭಾಗಿಯಾಗಲಿದ್ದು ಆರ್.ಎಸ್.ಎಸ್ ಅಖಿಲ ಭಾರತ ಪ್ರತಿನಿಧಿ ಸಭಾದ ಪ್ರಮುಖರು ಸೇರಿ 800 ಮಂದಿ ಅಪೇಕ್ಷಿತರು ಭಾಗಿಯಾಗಲಿದ್ದಾರೆ

ಅಗಸ್ಟ್ 27ರಂದು ಆರ್.ಎಸ್.ಎಸ್ ಮತ್ತು ಬಿಜೆಪಿ ಸಮನ್ವಯ ಬೈಠಕ್ ನಡೆಯಲಿದ್ದು ಬಿಜೆಪಿ ಸೇರಿ ಸಂಘಪರಿವಾರ ಸಂಘಟನೆಗಳ ಪ್ರಮುಖರ ಸಮನ್ವಯ ಬೈಠಕ್ ನಡೆಸಲಿದ್ದಾರೆ.

ಬಿಜೆಪಿಯಿಂದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹಾಗೂ ಸಂಘಟನಾ ಕಾರ್ಯದರ್ಶಿ ರಾಜೇಶ್ ಗೆ ಆಹ್ವಾನ ನೀಡಲಾಗಿದೆ.

ಇತ್ತೀಚಿನ ಬೆಳವಣಿಗೆಗಳು ‌ಹಾಗೂ ಹಲವು ವಿಚಾರಗಳ ಬಗ್ಗೆ ಬೈಠಕ್ ನಲ್ಲಿ  ಚರ್ಚೆ‌ ನಡೆಯುವ ಸಾಧ್ಯತೆ ಇದೆ. ಅಗಸ್ಟ್ 28ರ ಕೊನೆಯ ದಿನ ಆರ್.ಎಸ್.ಎಸ್ ದಕ್ಷಿಣ ಪ್ರಾಂತದ ಜವಾಬ್ದಾರಿಗಳ ಬದಲಾವಣೆ ಸಾಧ್ಯತೆ ಇದ್ದು ಚುನಾವಣಾ ವರ್ಷವಾದ ‌ಕಾರಣ ಸಂಘದ ಕಾರ್ಯಚಟುವಟಿಕೆ ಹಾಗೂ ಪಕ್ಷದ ನಡೆಯ ಹೀಗೆ ಹಲವು ವಿಚಾರಗಳ ಚರ್ಚೆ ನಡೆಯಲಿದೆ

Exit mobile version