Site icon Ullalavani

ಪುತ್ತೂರಿನಲ್ಲಿ ಮತ್ತೆ ಹಿಂದೂ ಕಾರ್ಯಕರ್ತರಿಂದ ನೈತಿಕ ಪೊಲೀಸ್ ಗಿರಿ ಯತ್ನ!

ಪುತ್ತೂರು : ಕೆಫೆಗೆ ಬಂದಿದ್ದ ಭಿನ್ನ ಕೋಮಿನ ಯುವಕ-ಯುವತಿಯರಿಗೆ ಹಿಂದೂ ಸಂಘಟನೆ ಕಾರ್ಯಕರ್ತರು  ಆಕ್ಷೇಪ ವ್ಯಕ್ತಪಡಿಸುವ ಮೂಲಕ ನೈತಿಕ ಪೊಲೀಸ್ ಗಿರಿಗೆ ಯತ್ನಿಸಿದ ಘಟನೆ ಪುತ್ತೂರಿನಲ್ಲಿ ಬುಧವಾರ ನಡೆದಿದೆ.

ಪುತ್ತೂರಿನ ನಗರದ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದ್ದು ಓರ್ವ ಹಿಂದೂ ಯುವತಿ, ಇಬ್ಬರು ಮುಸ್ಲಿಂ ಯುವಕರು ಹಾಗೂ ಕ್ರಿಶ್ಚಿಯನ್ ಯುವತಿಯರು
ಜ್ಯೂಸ್ ಕುಡಿಯಲು ಬಂದಿದ್ದ ವೇಳೆ ಕೆಫೆ ಮುಂಭಾಗ  ಹಿಂದೂ ಕಾರ್ಯಕರ್ತರು ಸೇರಿದ್ದಾರೆ. ಈ ಬಗ್ಗೆ
ಪುತ್ತೂರು ನಗರ ಠಾಣೆಗೆ ಹಿಂದೂ ಕಾರ್ಯಕರ್ತರು ನೀಡಿದ ಹಿನ್ನಲೆಯಲ್ಲಿ ಪುತ್ತೂರು ನಗರ ಠಾಣೆ ಎಸ್ ಪಿ ಶ್ರೀಕಾಂತ್ ರಾಥೋಡ್ ಸ್ಥಳಕ್ಕೆ ಆಗಮಿಸಿ
ಗೊಂದಲ ಪರಿಸ್ಥಿತಿ ಹಿನ್ನೆಲೆ ಭಿನ್ನ ಕೋಮಿನ ಜೋಡಿಗಳನ್ನು  ವಿಚಾರಣೆ ನಡೆಸಿ ಬಳಿಕ ಮನೆಯವರಿಗೆ ‌ಮಾಹಿತಿ ನೀಡಿದ್ದಾರೆ

Exit mobile version