UN networks
ಮಂಗಳೂರು: ಸರ್ಕಾರಿ ಜಾಗದಲ್ಲಿ ಗಣೇಶೋತ್ಸವ ಮಾಡಲು ಬಿಡಲ್ಲ ಅನ್ನೋದಕ್ಕೆ ಅದು ಯಾರಪ್ಪನ ಆಸ್ತಿಯೂ ಅಲ್ಲ. ಸರ್ಕಾರಿ ಜಾಗದಲ್ಲಿ ಸಾರ್ವಜನಿಕ ಕಾರ್ಯಕ್ರಮ ಮಾಡಲು ಅವಕಾಶ ಕೊಡಲೇ ಬೇಕು ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅವರು ಮಂಗಳೂರಿನಲ್ಲಿ ಗುರುವಾರದಂದು ಮಾತನಾಡಿದ ಅವರು ಮೊಟ್ಟೆಯಲ್ಲಿ ಹಣ ಮಾಡಿ ಕಾಂಗ್ರೆಸ್ ಗೆ ಹಣ ಕೊಟ್ಟವರು ಜಯಾಮಾಲರವರು. ನೆರೆ ಸಂಗ್ರಹದ ಹಣದಲ್ಲೇ 80% ಹಣವನ್ನು ಲೂಟಿ ಮಾಡಿದ ಪಕ್ಷ ಅಂದರೆ ಅದು ಕಾಂಗ್ರೆಸ್ ಪಕ್ಷ ಈ ಪಕ್ಷಕ್ಕೆ ನಿಜವಾದ ನೈತಿಕತೆ ಇದ್ದರೆ
ಸಾಕ್ಷ್ಯ ಕೊಡಲಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ಎಲ್ಲದಕ್ಕೂ ಸಾಕ್ಷ್ಯ ಕೊಟ್ಟು ಮಾಡನಾಡಲಿ.40% ಕಮಿಷನರ್ ವಿಚಾರದಲ್ಲಿ ಸಾಕ್ಷಿಗಳು ಏನಿದೆ? ಇದ್ದರೆ ಕೊಡಲಿ. ಕೆಂಪಣ್ಣ ಸುಮ್ಮನೆ ಮಾತನಾಡೋ ಬದಲು ಪುರಾವೆ ಕೊಟ್ಟರೆ ನಾವು ನೋಡುತ್ತೇವೆ ಎಂದರು
ಮಾಜಿ ಸಚಿವ ಈಶ್ವರಪ್ಪರಿಗೆ ಬೆದರಿಕೆ ಪತ್ರ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು
ಇಂಥ ಘಟನೆ ನಡೆಯುತ್ತಾ ಇದ್ದರೆ, ಸರ್ಕಾರ ಈಶ್ವರಪ್ಪನವರಿಗೆ ಭದ್ರತೆ ಕೊಡುತ್ತದೆ ಈದ್ಗಾ ಮೈದಾನ ಸರ್ಕಾರಿ ಜಾಗ, ಅಲ್ಲಿ ಗಣೇಶ ಪ್ರತಿಮೆ ಇಡಬಹುದು. ಸ್ಥಳೀಯ ಆಡಳಿತಕ್ಕೆ ಅರ್ಜಿ ಕೊಟ್ಟರೆ ಗಣೇಶೋತ್ಸವಕ್ಕೆ ಅವಕಾಶ ಕೊಡುತ್ತಾರೆ. ಸರ್ಕಾರಿ ಜಾಗದಲ್ಲಿ ಮಾಡಲು ಬಿಡಲ್ಲ ಅನ್ನೋದಕ್ಕೆ ಅದು ಯಾರಪ್ಪನ ಆಸ್ತಿಯೂ ಅಲ್ಲ. ಸರ್ಕಾರಿ ಜಾಗದಲ್ಲಿ ಸಾರ್ವಜನಿಕ ಕಾರ್ಯಕ್ರಮ ಮಾಡಲು ಅವಕಾಶ ಕೊಡಲೇ ಬೇಕು ಎಂದರು.
