Site icon Ullalavani

ಉಳ್ಳಾಲ್‌ ನ್ಯೂಸ್‌ .ಕಾಂ ಸುದ್ಧಿ ಇಂಪ್ಯಾಕ್ಟ್ ಕೆಎಸ್‌ಆರ್‌ಪಿ  ಜಾಗದಲ್ಲಿ ಮರ ಕಡಿದ ಪ್ರಕರಣ ಡಿಎಫ್‌ಓನಿಂದ ತನಿಖೆಗೆ ಆದೇಶ

UN networks

ಕೊಣಾಜೆ : ಅಸೈಗೋಳಿ ಕೆಎಸ್ ಆರ್ ಪಿ ಜಾಗದಲ್ಲಿ ಮರಗಳನ್ನು ಕಡಿದು ಅಕ್ರಮ ಮಾರಾಟ ಮಾಡಿರುವ ಶಂಕೆ ಕುರಿತು ಉಳ್ಳಾಲ್‌ ನ್ಯೂಸ್‌ .ಕಾಂ ನಲ್ಲಿ ಸುದ್ಧಿ ಪ್ರಕಟವಾಗಿದ್ದು, ಇದಕ್ಕೆ ಪ್ರತಿಕ್ರಯಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾರ ವಿಭಾಗೀಯ ಅರಣ್ಯ ಅಧಿಕಾರಿ ಆಶೀಶ್‌ ರೆಡ್ಡಿ ಎಂ.ವಿ ಐಎಫ್‌ ಎಸ್‌ ಕೂಡಲೇ ತನಿಖೆ ನಡೆಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಡಿಎಫ್‌ಓ ನಿರ್ದೇಶನದ ಮೇರೆಗೆ ಎಸಿಎಫ್‌ ಸುಬ್ರಹ್ಮಣ್ಯೇಶ್ವರ್‌ ರಾವ್‌ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ತನಿಖೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.  ಕ್ಷಿಪ್ರವಾಗಿ ಪ್ರತಿಕ್ರಿಯಿಸಿರುವ ಡಿಎಫ್‌ ಓ  ಮರ ಕಡಿದಿರುವುದು  ಖಚಿತವಾದಲ್ಲಿ ಕಠಿಣ ಕ್ರಮಕೈಗೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಅಸೈಗೋಳಿಯ ಕೆಎಸ್ ಆರ್ ಪಿ 7ನೇ ಬೆಟಾಲಿಯನ್ ಆವರಣದಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ಲಕ್ಷಾಂತರ ಮೌಲ್ಯದ ಹಲವು, ಅಕೇಶಿಯಾ ಮರಗಳನ್ನು ಕಡಿದು ಮಾರಾಟ ಮಾಡಿರುವ ಆರೋಪ ವ್ಯಕ್ತವಾಗಿದೆ. 6 ಹಲಸಿನ ಮರ, 1 ಅಕೇಶಿಯಾ ಮರ ಸೇರಿ ಹತ್ತಕ್ಕೂ ಅಧಿಕ ಮರಗಳನ್ನು ಮಾರಣ ಹೋಮ ಮಾಡಲಾಗಿದೆ. ಅರಣ್ಯ ಇಲಾಖೆ ಗಮನಕ್ಕೆ ತರದೇ ಲಕ್ಷಾಂತರ ಮೌಲ್ಯದ ಮರಗಳ ಮಾರಾಟ ಮಾಡಲಾಗಿದೆ ಅನ್ನುವ ಸುದ್ಧಿಯನ್ನು  ಉಳ್ಳಾಲ್‌ ನ್ಯೂಸ್.ಕಾಂ ಪ್ರಚಾರ ಮಾಡಿತ್ತು.

Exit mobile version