Site icon Ullalavani

ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ರಜತ ಮಹೋತ್ಸವ ಸಮಾರೋಪ

UN networks

ಉಳ್ಳಾಲ: ಉತ್ಸವಗಳಿಂದ ಮನುಷ್ಯ ಮನುಷ್ಯರ ನಡುವೆ ಸಂಬಂದಗಳು, ದಾರ್ಮಿಕ ಶ್ರದ್ದೆಗಳು ಹೆಚ್ಚು ಹೆಚ್ಚು ವಿಕಸಿತಗೊಳ್ಳುತ್ತದೆ, ನಾವು ಧರ್ಮದ ಆದಾರದಲ್ಲಿ ಸಮಾಜವನ್ನು ಒಟ್ಟುಗೂಡಿಸಿದರೆ ಪರಿಪೂರ್ಣವಾಗಿ ಅದು ಉಳಿಯುತ್ತದೆ ಎಂಬುದೇ ಶ್ರೀ ಕೃಷ್ಣನ ಸಂದೇಶ, ಅದನ್ನು ಸಾಕಾರಗೊಳಿಸುವ ಕಾರ್ಯ 25 ವರ್ಷಗಳಿಂದ ಕುಂಪಲದಲ್ಲಿ ನಡೆಯುತ್ತಿದೆ ಎಂದು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ನಡೆದ 25 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
 ಶ್ರೀ ಮಹಾಲಕ್ಷ್ಮೀ  ಕ್ಷೇತ್ರ ಶ್ರೀಧಾಮ ಮಾಣಿಲದ ಮೋಹನ್‍ದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್ ಉಳೆಪಾಡಿಗುತ್ತು ದೀಪಬೆಳಗಿಸಿದರು. ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್,  ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್‍ಹೌಸ್, ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ವಿದ್ಯಾರತ್ನ ಆಂಗ್ಲಮಾದ್ಯಮ ಶಾಲೆಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಭಗವತೀ ಕ್ಷೇತ್ರದ ಮೊಕ್ತೇಸರ ಸುರೇಶ್ ಭಟ್ನಗರ,  ವಿಶ್ವಹಿಂದೂ ಪರಿಷತ್ ಭಜರಂಗದಳದ ಗೋಪಾಲ್ ಕುತ್ತಾರ್, ಶರಣ್ ಪಂಪ್‍ವೆಲ್, ಶಿವಾನಂದ ಮೆಂಡನ್, ಭುಜಂಗ ಕುಲಾಲ್,  ಪುನೀತ್ ಅತ್ತಾವರ, ಬಿಜೆಪಿ ಮುಖಂಡ ಸಂತೋಷ್ ಶೆಟ್ಟಿ ಅಸೈಗೋಳಿ, ಚಂದ್ರಶೇಖರ್ ಉಚ್ಚಿಲ್, ಬಿಜೆಪಿ ಮಂಡಲ ಕಾರ್ಯದರ್ಶಿ ಹೇಮಂತ್ ಶೆಟ್ಟಿ, ಶಕ್ತಿಕೇಂದ್ರದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು,  ಯುವ ಮೋರ್ಚಾದ ಸಚಿನ್ ಮೋರೆ, ಉದ್ಯಮಿಗಳಾದ ಸೀತರಾಮ ಶೆಟ್ಟಿ ದಡಸ್, ದಿನೇಶ್ ರೈ ಕಳ್ಳಿಗೆ,ಮೋಹನ್ ಮೆಂಡನ್, ಜಗದೀಶ್ ಆಳ್ವ ಕುವತ್ತ ಬೈಲ್, ಪ್ರವೀಣ್ ಶೆಟ್ಟಿ ಮುಡಿಪು, ಅಶೋಕ್ ರೈ ಮಡ್ಯಾರ್, ಗೀತೇಶ್ ಕುತ್ತಾರ್, ವಿಜೇಶ್ ನಾಯಕ್, ಹಿಂದೂ ಜಾಗರಣ ವೇದಿಕೆಯ ಪ್ರಕಾಶ್ ಕುಂಪಲ, ಶಾರದಾ ಮಹೋತ್ಸವ ಸಮಿತಿಯ ವಿಶ್ವನಾಥ್ ಕೊಲ್ಯ, ಕೊಲ್ಯ ಬಿಲ್ಲವ ಸಂಘದ ಈಶ್ವರ್ ಕನೀರುತೋಟ,  ಸಾಯಿ ಪರಿವಾರ್ ಟ್ರಸ್ಟ್ ನ ಪುರುಷೋತ್ತಮ ಕಲ್ಲಾಪು, ಭಗತ್ ಸಿಂಗ್ ಪ್ರತಿಷ್ಟಾನದ ಜೀವನ್ ತೊಕ್ಕೊಟ್ಟು,  ಮುಂತಾದವರು ಆಗಮಿಸಿದ್ದರು.
ರಜತ ವರ್ಷದ ಅಂಗವಾಗಿ ಕುಂಪಲ ರಾಜಬೀದಿಯಲ್ಲಿ ಸುಮಾರು 5000 ಕ್ಕೂ ಅ„ಕ ಮಡಕೆಗಳು ಓಕುಲಿ ಕಂಬದಲ್ಲಿ, ಶೋಭಯಾತ್ರೆಯಲ್ಲಿ ಸ್ಥಬ್ದ ಚಿತ್ರ, ಹುಲಿವೇಷ, ನಾಸಿಕ್ ಬ್ಯಾಂಡ್, ಚೆಂಡೆವಾದನ, ಸ್ಯಾಕ್ಸೋಪೆÇೀನ್, ದೃಶ್ಯರೂಪಕ, ಭಜನಾ ತಂಡಗಳು  ಜನರನ್ನು ಆಕರ್ಷಿಸಿತ್ತು.
ಮಂದಿರದ ಅಧ್ಯಕ್ಷರಾದ ಸತೀಶ್ ಕುಂಪಲ ಪ್ರಸ್ತಾವನೆಗೈದು ಸ್ವಾಗತಿಸಿದರು ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರ್ವಹಿಸಿದರು.

Exit mobile version