UN networks
ಉಳ್ಳಾಲ: ಅಸೈಗೋಳಿ ಕೆಎಸ್ ಆರ್ ಪಿ ಜಾಗದಲ್ಲಿ ಮರಗಳನ್ನು ಕಡಿದು ಅಕ್ರಮ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಅಸೈಗೋಳಿಯ ಕೆಎಸ್ ಆರ್ ಪಿ 7ನೇ ಬೆಟಾಲಿಯನ್ ಆವರಣದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಲಕ್ಷಾಂತರ ಮೌಲ್ಯದ ಹಲವು, ಅಕೇಶಿಯಾ ಮರಗಳನ್ನು ಕಡಿದು ಮಾರಾಟ ಮಾಡಿರುವ ಆರೋಪ ವ್ಯಕ್ತವಾಗಿದೆ. 6 ಹಲಸಿನ ಮರ, 1 ಅಕೇಶಿಯಾ ಮರ ಸೇರಿ ಹತ್ತಕ್ಕೂ ಅಧಿಕ ಮರಗಳನ್ನು ಮಾರಣ ಹೋಮ ಮಾಡಲಾಗಿದೆ. ಅರಣ್ಯ ಇಲಾಖೆ ಗಮನಕ್ಕೆ ತರದೇ ಲಕ್ಷಾಂತರ ಮೌಲ್ಯದ ಮರಗಳ ಮಾರಾಟ ಮಾಡಲಾಗಿದೆ.
ಇದಕ್ಕೆ ಬೆಟಾಲಿಯನ್ ಕ್ಯಾಂಪಸ್ ನಲ್ಲಿ ಕಡಿದ ಮರದ ಬುಡಗಳು, ಟೊಂಗೆಗಳು ಸಾಕ್ಷಿಯಾಗಿದೆ. ಅನಧಿಕೃತವಾಗಿ ಬೆಟಾಲಿಯನ್ ಅಧಿಕಾರಿಗಳೇ ಮರ ಕಡಿದಿರುವ ಶಂಕೆ ಇದೆ. ಸದ್ಯ ಕೆಲ ಮರದ ಬುಡಗಳಿಗೆ ಮಣ್ಣು ಹಾಕಿ ಮುಚ್ಚಲಾಗಿದೆ. ಮಾರಣಹೋಮ ನಡೆಸಿರುವ ಮರಗಳ ಮೌಲ್ಯ ಲಕ್ಷಕ್ಕೂ ಅಧಿಕವಾಗಿದೆ. ಕೇಸ್ ಆರ್ ಪಿ ಕ್ಯಾಂಪಸ್ ಎಂಟ್ರಿಯಾಗುವ ದಾರಿ, ಕ್ಯಾಂಟೀನ್ ಜಾಗಗಳಲ್ಲಿ ಹಲವು ವರ್ಷಗಳಿಂದ ಇದ್ದ ಮರಗಳನ್ನು ಕಡಿದು ಮಾರಾಟ ಮಾಡಲಾಗಿದೆ. ಪ್ರಕರಣ ಮುಚ್ಚಿ ಹಾಕಲು ಕೆಎಸ್ ಆರ್ ಪಿ ಅಧಿಕಾರಿಗಳ ಯತ್ನಿಸುತ್ತಿರುವ ಕುರಿತು ತಿಳಿದುಬಂದಿದೆ.
