Site icon Ullalavani

ಹಿಜಾಬ್ ದಂಗಲ್: 16% ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜ್ ಡ್ರಾಪ್!

UN networks

ಮಂಗಳೂರು: ಹಿಜಾಬ್ ಗೆ ಸಂಬಂಧಿಸಿದಂತೆ ಕರಾವಳಿಯಾದ್ಯಂತ 16% ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನಿಂದ ಟಿಸಿಯನ್ನು ಹಿಂಪಡೆದಿದ್ದು ಇದು ಹಿಜಾಬ್ ಸಮರಕ್ಕೆ  ಮುಸ್ಲಿಂ ವಿದ್ಯಾರ್ಥಿಯರ ನಿರ್ಧಾರ ಅನ್ನೋದು ಸಾಬೀತಾಗಿದೆ.
ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅನುಮತಿ‌ ಇಲ್ಲ ಎಂಬ ಕಾರಣಕ್ಕೆ‌ ದ.ಕ‌ಜಿಲ್ಲೆ, ಉಡುಪಿ ಜಿಲ್ಲೆಯಾದ್ಯಾಂತ 16% ಮುಸ್ಲಿಂ ವಿದ್ಯಾರ್ಥಿನಿಯರು  ಟಿಸಿ ಹಿಂಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟಿಸಿ ಪಡೆಯಬಹುದು ಎಂದು ಈ‌ ಮೊದಲೇ  ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ.ಎಸ್ ಯಡಪಡಿತ್ತಾಯ ಹೇಳಿದ್ದರು  ಹೀಗಾಗಿ‌ ದ.ಕನ್ನಡ ಹಾಗೂ ಉಡುಪಿ ಜಿಲ್ಲೆಯ 900 ವಿದ್ಯಾರ್ಥಿನಿಯರ ಪೈಕಿ 145 ಮಂದಿ ವಿದ್ಯಾರ್ಥಿನಿಯು ಟಿಸಿ ಹಿಂಪಡೆದಿದ್ದಾರೆ.

ಸರ್ಕಾರಿ ಕಾಲೇಜಿನಿಂದ 34%,ಅನುದಾನಿತ ಕಾಲೇಜಿನಿಂದ 13% ವಿದ್ಯಾರ್ಥಿನಿಯರಿಂದ ಟಿಸಿ ಹಿಂಪಡೆದಿದ್ದಾರೆ ಎಂದು ಆರ್ ಟಿ ಐ ಪ್ರಶ್ನೆಗೆ ಶಿಕ್ಷಣ ಇಲಾಖೆ ಉತ್ತರ‌ ನೀಡಿದೆ.

ಟಿಸಿ ಹಿಂಪಡೆಯಲು ಬಿ.ಸಿ ನಾಗೇಶ್ ಮೂಲ ಕಾರಣ!

ವಿದ್ಯಾರ್ಥಿನಿಯರು ಟಿಸಿ ಪಡೆಯಲು ಮುಖ್ಯ ಕಾರಣ ಸಚಿವ ಬಿ.ಸಿ ನಾಗೇಶ್ ಅಂದ
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿನಿ ಗೌಸಿಯಾ

ಹಿಜಾಬ್ ಧರಿಸಲು ಅವಕಾಶ ಇಲ್ಲದ ಕಾರಣ ಕಾಲೇಜಿನಿಂದ ಟಿಸಿ ಪಡೆಯಲಾಗಿದ್ದು ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಹಿಂಪಡೆಯಲು ಸಚಿಬ ಬಿ.ಸಿ ನಾಗೇಶ್ ಮುಖ್ಯ ಕಾರಣ ಎಂದು ಮಂಗಳೂರಿನ ಹಿಜಾಬ್ ಹೋರಾಟಗಾರ್ತಿ ಗೌಸಿಯಾ ತಿಳಿಸಿದ್ದಾರೆ‌.

ಸಂವಿಧಾನ ನೀಡಿರುವ ಹಕ್ಕಿನ ಪ್ರಕಾರ ಶಿಕ್ಷಣ ಪಡೆಯಲು ನಾಗೇಶ್ ಬಿಡಲಿಲ್ಲ. ತುಂಡು ಬಟ್ಟೆಯನ್ನೇ ದೊಡ್ಡ ವಿವಾದವನ್ನಾಗಿ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೇ ನಷ್ಟವಾಗಲಿದೆ. ಹಲವು ಸರ್ಕಾರಿ ಕಾಲೇಜುಗಳು ಮುಚ್ಚಲಿದೆ. ಇಡೀ ರಾಜ್ಯಾದ್ಯಂತ30% ಅಧಿಕ ವಿದ್ಯಾರ್ಥಿನಿಯರು ಕಾಲೇಜು ಬಿಟ್ಟಿದ್ದಾರೆ. ರಾಜ್ಯಕ್ಕೆ ಇದು ಜಲ್ವಂತ ಸಮಸ್ಯೆಯಾಗಲಿದೆ‌ ಎಂದು ಅವರು ಹೇಳಿದ್ದಾರೆ.

Exit mobile version