Site icon Ullalavani

ಕುಮಾರಧಾರ ನದಿಯಲ್ಲಿ ಕೊಚ್ಚಿ ಹೋದ ಯುವಕ!

UN networks

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ  ಕುಮಾರಧಾರ ನದಿಯಲ್ಲಿ ಸ್ನಾನಕ್ಕಿಳಿದ ಯುವಕನೋರ್ವ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಭಾನುವಾರ ನಡೆದಿದೆ‌

ಮಂಡ್ಯದ ಶಿವು( 25) ನೀರಿನಲ್ಲಿ ಕೊಚ್ಚಿ ಹೋದ ಯುವಕ.

ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಶಿವು 21 ಜನರ ತಂಡದ ಜೊತೆ ಕುಕ್ಕೆಗೆ ಆಗಮಿಸಿದ್ದು, ಕುಮಾರಧಾರ ಸ್ನಾನಘಟ್ಟಕ್ಕೆ ಬಂದಿದ್ದರು ತಡೆಹಗ್ಗ ದಾಟಿ ನದಿಗೆ ಇಳಿಯದಂತೆ ಸ್ನೇಹಿತರು ಸೂಚಿಸಿದರೂ ಲೆಕ್ಕಿಸದೇ ಯುವಕ ನದಿಗೆ ಇಳಿದಿದ್ದು ಅನಾಹುತ ಸಂಭವಿಸಿದೆ.
ನದಿ ನೀರಿನಲ್ಲಿ ಕೊಚ್ಚಿ ಹೋದ ಯುವಕನ ಪತ್ತೆಗೆ ಬೋಟ್ ಬಳಸಿ ಹುಟುಕಾಟ ನಡೆಸಲಾಗಿದೆ.‌

ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.‌

Exit mobile version