Un networks
ಬೆಂಗಳೂರು: ಕಿರು ತೆರೆಯ ಬಹುತೇಕ ನಟರು ಒಂದಲ್ಲ ಒಂದು ವಿವಾದದಲ್ಲಿ ಪ್ರತಿ ದಿನ ಸುದ್ದಿಯಲ್ಲಿರುತ್ತಾರೆ. ಕೆಲವು ದಿನಗಳ ಹಿಂದೆ ಕಿರುತೆರೆ ನಟ ಚಂದನ್ ವಿವಾದದ ಸುದ್ದಿಯಲ್ಲಿದ್ದರು. ಇದೀಗ ಮತ್ತೋರ್ವ ಕಿರಿತೆರೆಯ ಟಾಪ್ ನಟ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಹೌದು ಕಿರು ತೆರೆಯ ಜನಪ್ರಿಯ ಸಿರಿಯಲ್ ಗಳಲ್ಲಿ ಒಂದಾಗಿರುವ ಜೊತೆ ಜೊತೆ ಧಾರಾವಾಹಿಯ ನಟ ವಿಷ್ಣುರ್ಧನ್ ಅಳಿಯ ಖ್ಯಾತ ನಟ ಅನಿರುದ್ಧ್ ಗೆ ಎರಡು ವರ್ಷಗಳ ಕಾಲ ಧಾರಾವಾಹಿಗಳಲ್ಲಿ ನಟಿಸದಂತೆ ನಿರ್ಬಂಧ ಹಾಕಲಾಗಿದೆ.
ಜೊತೆಜೊತೆಯಲಿ ಸೀರಿಯಲ್ ನಿರ್ದೇಶಕ ಮಧುಗೆ ‘ಮೂರ್ಖ’ ಎಂದು ಅಶ್ಲೀಲವಾಗಿ ಬೈದಿದ್ದ ಕಾರಣಕ್ಕಾಗಿ ಅನಿರುದ್ದ್ ಅವರನ್ನು ಕಿರುತೆರೆಯಿಂದ ಕಿಕ್ ಔಟ್ ಮಾಡಲಾಗಿದೆ
ಅನಿರುದ್ಧ್ ಮತ್ತು ‘ಜೊತೆ ಜೊತೆಯಲಿ’ ಸೀರಿಯಲ್ ತಂಡದ ನಡುವೆ ಮನಸ್ತಾಪ ಉಂಟಾಗಿದ್ದು ಶೂಟಿಂಗ್ ವೇಳೆ ಕಿರಿಕ್ ಆಗಿದ್ದು ಅವರ ಜೊತೆ ತಂತ್ರಜ್ಞರ ತಂಡ ಮುನಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಅನಿರುದ್ಧ್ ಅವರ ಕೆಟ್ಟ ವರ್ತನೆ ಹಿನ್ನೆಲೆ ನಿರ್ಮಾಪಕರ ಸಂಘದಿಂದ ಅನಿರುದ್ದ್ ಗೆ ಗೆಟ್ ಪಾಸ್ ನೀಡಲಾಗಿದೆ.
ಕನ್ನಡ ವಾಹಿನಿಯ ಜನಪ್ರಿಯ ಚಾನೆಲ್ ನಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ
ನಟ ಅನಿರುದ್ಧ್ ಅವರು ಆರ್ಯವರ್ಧನ್ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದರು.
