Site icon Ullalavani

ಕುಂಪಲ 25ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವಕ್ಕೆ ಚಾಲನೆ

UN networks


ಕುಂಪಲ: ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ನಡೆಯುವ 25ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಸದಸ್ಯ ಕೆ.ಟಿ. ಸುವರ್ಣ ಚಾಲನೆ ನೀಡಿದರು. ಸಂಜೆ ವೇಳೆ ಮೊಸರುಕುಡಿಕೆ ಉತ್ಸವ ವಿವಿಧ ರೀತಿಯ ಆಕರ್ಷನೀಯ ಸ್ತಬ್ಧಚಿತ್ರಗಳ ಮೂಲಕ ವಿಜೃಂಭಣೆಯಿಂದ ಜರಗಿತು.


ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ್ ಅಡ್ಯಂತ್ತಾಯ, ಶ್ರೀ ಸೋಮನಾಥ ದೇವಸ್ಥಾನದ ಮೊಕ್ತೇಸರ ರಾಮ್‍ದಾಸ್ ಸೋಮೇಶ್ವರ, ಮೆಸ್ಕಾಂ ಜಾಗೃತದಳದ ಅಧೀಕ್ಷಕ ಪ್ರವೀಣ್ ಉಳ್ಳಾಲ್ ಬೈಲ್, ಗೋವನಿತಾಶ್ರಯದ ಟ್ರಸ್ಟಿ ರವಿ ರೈ ಪಜೀರ್, ಪ್ರಗತಿಪರ ಕೃಷಿಕ ರಂಜಿತ್ ಸುಲಾಯ ಮಂಜನಾಡಿ, ಉದ್ಯಮಿ ಶ್ರೀನಿವಾಸ್ ಬೆಂಗಳೂರು, ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ, ಗೌರವಾಧ್ಯಕ್ಷ ಕೇಶವದಾಸ್ ಬಗಂಬಿಲ, ಕಾರ್ಯದರ್ಶಿ ರವೀಂದ್ರ ಕುಂಪಲ, ಉತ್ಸವ ಸಮಿತಿ ಅಧ್ಯಕ್ಷ ಪ್ರಹ್ಲಾದ್ ಕುಮಾರ್ ಇಂದಾಜೆ, ಕಾರ್ಯದರ್ಶಿ ಹರೀಶ್ ಮೂರುಕಟ್ಟ ಮಹಿಳಾ ಸಮಿತಿ ಅಧ್ಯಕ್ಷೆ ಸುಶೀಲ.ಕೆ., ಕಾರ್ಯದರ್ಶಿ ಶಾಲಿನಿ ಗಣೇಶ್, ರಜತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಮೋಹನ್ ಶೆಟ್ಟಿ, ಕಾರ್ಯಾಧ್ಯಕ್ಷ ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು.
ಪ್ರವೀಣ್ ಎಸ್ ಕುಂಪಲ ನಿರೂಪಿಸಿದರು.

Exit mobile version