UN networks
ಸುರತ್ಕಲ್ : ವ್ಯಕ್ತಿಯಿಂದ ಕತ್ತಿ ಬೀಸಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಸುರತ್ಕಲ್ ಬಳಿಯ ಕಾನಾ ಎಂಬಲ್ಲಿ ಶುಕ್ರವಾರ ನಡೆದಿದೆ.
ಝಾರ್ಖಂಡ್ ಮೂಲದ ಅತುಲ್ (30) ಎಂಬಾತನಿಂದ ಕೃತ್ಯ ನಡೆದಿದ್ದು ಈತ ಮಾನಸಿಕ ಅಸ್ವಸ್ಥತ ಎಂದು ತಿಳಿದುಬಂದಿದೆ.
ಮಡಗಾಂವ್ ನಿಂದ ಕಾಸರಗೋಡಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈತ ಸುರತ್ಕಲ್ ರೈಲ್ವೇ ಸ್ಟೇಷನ್ ನಲ್ಲಿ ಇಳಿದು ಕಾನಾ ಬಳಿ ಗಲಾಟೆ ಮಾಡಿದ್ದಾನೆ.
ವೆಂಕಪ್ಪ ಎಂಬವರ ಬಳಿಯಿಂದ ಕತ್ತಿ ಕಿತ್ತುಕೊಂಡು ಹಲ್ಲೆಗೆ ಯತ್ನ ಮಾಡಿದ್ದು ಇದನ್ನು
ತಡೆಯಲು ಬಂದ ಇಮ್ರಾನ್ ಎಂಬ ಯುವಕನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಬಸ್ಸಿಗೆ ಕಲ್ಲು ತೂರಲು ಯತ್ನಿಸಿದ್ದಾನೆ. ತಕ್ಷಣ ಸ್ಥಳೀಯರು ಅತುಲ್ ನನ್ನು ಹಿಡಿದು ಥಳಿಸಿದ್ದಾರೆ.
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರಣ ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿದುಬಂದಿದ್ದು ಸದ್ಯ ಅತುಲ್ ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಸುರತ್ಕಲ್ ಪೊಲೀಸರು ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
