Site icon Ullalavani

ಸರಣಿ ಕೊಲೆ ಹಿನ್ನೆಲೆ: ಡಿಸಿ ಭೇಟಿಯಾದ ಜಾತ್ಯಾತೀತ ಪಕ್ಷಗಳ ನಿಯೋಗ

UN networks

ಮಂಗಳೂರು: ಜಿಲ್ಲೆಯಾದ್ಯಂತ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಜಾತ್ಯಾತೀತ ಪಕ್ಷಗಳ ಒಕ್ಕೂಟದಿಂದ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ಅಹಿತಕರ ಘಟನೆ ಹಿನ್ನೆಲೆ ಸಮಾನ ಮನಸ್ಕ ಪಕ್ಷಗಳಿಂದ ಒಗ್ಗಟ್ಟು ಪ್ರದರ್ಶನವಾಗಿದ್ದು ಮಾಜಿ ಸಚಿವ ರಮಾನಾಥ್ ರೈ ನೇತೃತ್ವದಲ್ಲಿ ಶುಕ್ರವಾರದಂದು ಕಾಂಗ್ರೆಸ್, ಜೆಡಿಎಸ್, ಸಿಪಿಐಎಂ, ಡಿವೈಎಫ್ಐ, ದಲಿತ ಸಂಘಟನೆಗಳ‌ ನಿಯೋಗ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದೆ.

ಅಹಿತಕರ ಘಟನೆಗಳ ಹಿಂದೆ ಇರುವ ಪಿತೂರಿದಾರರ ಬಂಧನಕ್ಕೆ ಆಗ್ರಹ ಸರ್ವಪಕ್ಷದ ಮುಖಂಡರು ಆಗ್ರಹಿಸಿದ್ದು ಜನಸಾಮಾನ್ಯರಿಗೆ ಅವರು ಯಾರೆಂದು ಗೊತ್ತಿದೆ, ಸರ್ಕಾರ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಆಸ್ತಿ ಮುಟ್ಟುಗೋಲು ,ಎನ್ ಐ ಎ ತನಿಖೆ ಎಲ್ಲಾ ಪ್ರಕರಣಗಳಲ್ಲೂ ಆಗಬೇಕು ಕಾರ್ಯಾಂಗದ ಮುಖ್ಯಸ್ಥರಾಗಿ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಕೋಮು ದ್ವೇಷ ಪರಾಕಷ್ಟೆಗೆ ತಲುಪಿದೆ ಇದನ್ನು ಈಗಲೇ ಮಟ್ಟ ಹಾಕದೇ ಇದ್ದರೆ ಮುಂದಿನ ದಿನ ಸಂಕಷ್ಟವಿದೆ
ಹಿಜಾಬ್ ವಿವಾದ ಆರಂಭ ಆದಾಗಲೇ ಜಿಲ್ಲಾಡಳಿತವನ್ನು ಎಚ್ಚರಿಸಿದ್ದೆವು  ಆದರೆ ಇದೇ ಘಟನೆ ಮುಂದುವರೆದು ಸರಣಿ ಕೊಲೆಗೆ ಕಾರಣವಾಗಿದೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಂತೆ ಉಳಿದ ಪ್ರಕರಣವನ್ನೂ ಪರಿಗಣಿಸಬೇಕು. ಫಾಝಿಲ್ ಮತ್ತು ಮಸೂದ್ ಮನೆಗೆ ಜಿಲ್ಲಾಧಿಕಾರಿ ಭೇಟಿ ನೀಡಬೇಕು. ಕೆಲ ಕೋಮು ಕ್ರಿಮಿನಲ್ ಗಳು ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕಾದರೆ ಜಿಲ್ಲಾಡಳಿತ ಸರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಒಕ್ಕೂಟದ ಮುಖಂಡರಿಗೆ ಜಿಲ್ಲಾಧಿಕಾರಿ ಭರವಸೆ ನೀಡಿದ್ದು ಯಾವುದೇ ರೀತಿಯ ಕೋಮು ಸೌಹಾರ್ದ ಕದಡದಂತೆ ಜಿಲ್ಲಾಡಳಿತ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ. ಕೆಲವೊಂದು ತಪ್ಪುಗಳಾಗಿದ್ದರೆ ಅದನ್ನೂ ಜಿಲ್ಲಾಡಳಿತ ಸರಿಪಡಿಸಲಿದೆ. ಮಸೂದ್ ಹಾಗೂ ಫಾಝಿಲ್ ಕುಟುಂಬಕ್ಕೆ ಪರಿಹಾರ ವಿಚಾರ
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಬಿಡುಗಡೆ ಆಗಬೇಕು ಮನವಿ ಸಲ್ಲಿಸಿದ್ದರೆ ಸರ್ಕಾರಕ್ಕೆ ಮನವಿಯನ್ನು ಕಳುಹಿಸಲಾಗುವುದು ಎಂದರು

ನಿಯೋಗದಲ್ಲಿ ಕಾಂಗ್ರೆಸ್ ‌ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಮೊಯಿದ್ದೀನ್ ಬಾವಾ, ಅಭಯಚಂದ್ರ ಜೈನ್, ಡಿವೈಎಫ್, ಸಿಪಿಎಂ ಹಾಗೂ ಜೆಡಿಎಸ್ ಮುಖಂಡರು ಭಾಗಿ

Exit mobile version