Site icon Ullalavani

ಅನಧಿಕೃತ ಫ್ಲೆಕ್ಸ್ ತೆರವಿಗೆ ದ.ಕ ಜಿಲ್ಲಾಧಿಕಾರಿ ಸೂಚನೆ

UN networks

ಮಂಗಳೂರು: ಜಿಲ್ಲೆಯಲ್ಲಿ ಹಾಕಲಾಗಿರುವ ಅನಧಿಕೃತ ಮತ್ತು ವಿವಾದಾತ್ಮಕ ಫ್ಲೆಕ್ಸ್ ಗಳನ್ನು  ನಿರ್ದಾಕ್ಷಿಣ್ಯವಾಗಿ ತೆರೆವುಗೊಳಿಸುವಂತೆ  ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.


ಅವರು ಶುಕ್ರವಾರ ದ.ಕ ಜಿಲ್ಲಾಧಿಕಾರಿ ‌ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ‌ನಡೆಸಿ ಜಿಲ್ಲೆಯಲ್ಲಿ ‌ಫ್ಲೆಕ್ಸ್ ಅಳವಡಿಕೆ ಸಂಬಂಧ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದಾರೆ.
ಮಂಗಳೂರು ‌ಕಮಿಷನರ್ ಶಶಿಕುಮಾರ್, ಎಸ್ಪಿ‌ ಹೃಷಿಕೇಶ್, ಜಿ.ಪಂ‌ ಸಿಇಓ ಕುಮಾರ್, ಪಾಲಿಕೆ ‌ಕಮಿಷನರ್ ಅಕ್ಷಯ್ ಶ್ರೀಧರ್ ‌ಭಾಗಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಧಿಕೃತ ಜಾಗದಲ್ಲಿ ಮಾತ್ರ ಬ್ಯಾನರ್ ಗೆ ಅವಕಾಶ:

ಅಧಿಕಾರಿಗಳ ಸಭೆ ಬಳಿಕ  ಮಾತನಾಡಿದ ದ‌.ಕ ಜಿಲ್ಲಾಧಿಕಾರಿ ‌ಡಾ.ಕೆ.ವಿ‌.ರಾಜೇಂದ್ರ ದ.ಕ ಜಿಲ್ಲೆ ಕೋಮುಸೂಕ್ಷ್ಮ ಪ್ರದೇಶವಾಗಿರೋ ಕಾರಣ ಅಧಿಕಾರಿಗಳ ಜೊತೆ ಸಭೆ ನಡೆಸಲಾಗದೆ.ಅಧಿಕೃತ ಜಾಗಗಳಲ್ಲಿ ಬ್ಯಾನರ್ ಅಳವಡಿಗೆ ಅವಕಾಶ ನೀಡಬೇಕು. ಅದರಲ್ಲಿ ವಿವಾದಾತ್ಮಕ ವಿಷಯಗಳಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಅನಧಿಕೃತ ಫ್ಲೆಕ್ಸ್ ಹಾಕಿದ್ದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಅವುಗಳನ್ನು ತೆರವು ಮಾಡಬೇಕು. ಅನಧಿಕೃತ ಫ್ಲೆಕ್ಸ್ ಗಳ ಬಗ್ಗೆ ಕಂದಾಯ, ಪೊಲೀಸ್ ‌ಇಲಾಖೆ, ಪಾಲಿಕೆ ಸಮನ್ವಯಕ್ಕೆ ಸೂಚನೆ ನೀಡಲಗಿದೆ. ಅನಧಿಕೃತ ಫ್ಲೆಕ್ಸ್ ಗಳನ್ನು ತೆರವು ಮಾಡಲು ಸಮಯ ತೆಗೆದುಕೊಳ್ಳಬಾರದು. ಬೀಟ್ ಪೊಲೀಸರು ತಕ್ಷಣ ಅಂಥವುಗಳನ್ನ ತೆರವು ಮಾಡಬೇಕು. ಅನಧಿಕೃತ ಫ್ಲೆಕ್ಸ್ ತೆರವಿಗೆ ತಂಡ ರಚಿಸಿ ಜಿಲ್ಲೆಯಲ್ಲಿ ಕಾರ್ಯಾಚರಣೆ ಮಾಡುವಂತೆ ಸೂಚಿಸಲಾಗಿದೆ.ಪೊಲೀಸ್ ಇಲಾಖೆ ಮತ್ತು ‌ಕಂದಾಯ ತಂಡದಿಂದ ಕಾರ್ಯಾಚರಣೆ
ಅನಧಿಕೃತ ಫ್ಲೆಕ್ಸ್ ಹಾಕಿದವರ ವಿರುದ್ದ ಪೊಲೀಸ್ ವರದಿಯನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Exit mobile version