UN networks
ಮಂಗಳೂರು: ಬಿಜೆಪಿ ಮುಖಂಡ ಬೆಳ್ಳಾರೆಯ ಪ್ರವೀಣ್ ಹತ್ಯೆಯ ಐವರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಎನ್ ಐ ಎ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ.
ಪ್ರವೀಣ್ ಹತ್ಯೆ ಮಾಡಿದ ಐವರು ಆರೋಪಿಗಳನ್ನು ಮಂಗಳೂರು ಪೊಲೀಸರು ಕೆಲವು ದಿನಗಳ ಹಿಂದೆ ಬಂಧಿಸಿದ್ದರು. ಪೊಲೀಸರ ತನಿಖೆಯ ನಂತರ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಎನ್ ಐ ಎ ಹಸ್ತಾಂತರ ಮಾಡುವ ಬಗ್ಗೆ ಎಡಿಜಿಪಿ ಅಲೋಕ್ ಕುಮಾರು ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದರು. ಇದೀಗ ರಾಷ್ಟ್ರೀಯ ತನಿಖಾ ದಳ ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವ ಮೂಲಕ ಮಹತ್ತರವಾದ ಮಾಹಿತಿಗಳನ್ನು ಪಡೆದುಕೊಳ್ಳಲಿದೆ.
ಪ್ರಕರಣ ಆರೋಪಿಗಳಾದ ನೌಫಲ್, ಝೈನುಲ್ ಅಭಿದ್, ಮೊಹಮ್ಮದ್ ಸೈಯದ್, ಅಬ್ದುಲ್ ಬಶೀರ್ ಮತ್ತು ರಿಯಾಜ್ ಎಂಬ ಆರೋಪಿಗಳನ್ನು ಆಗಸ್ಟ್ 23 ರ ವರೆಗೆ ಸುಳ್ಯ ನ್ಯಾಯಾಲಯ ಎನ್ ಐ ಎ ವಶಕ್ಕೆ ನೀಡಿದೆ.
ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪೊಲೀಸ್ ಇಲಾಖೆ ಹಾಗೂ ರಾಜಕೀಯದಲ್ಲಿ ಮಹತ್ತರವಾರ ಸಂಚಲ ಮೂಡಿಸಿತ್ತು. ಪ್ರವೀಣ್ ಹತ್ಯೆಯ ತನಿಖೆಯನ್ನು ಸರಕಾರ ಎನ್ ಐಎ ಗೆ ವಹಿಸಿತ್ತು. ಪ್ರವೀಣ್ ಹತ್ಯೆಯ ಬಳಿಕ ಎನ್ ಐ ಎ ತಂಡ ಮಂಗಳೂರಿಗೆ ಆಗಮಿಸಿ ಪೊಲೀಸ್ ಇಲಾಖೆಯ ಜೊತೆ ತನಿಖೆಯಲ್ಲಿ ಕೈ ಜೊಡಿಸಿತ್ತು. ಪ್ರವೀಣ್ ಹತ್ಯೆ ಯ ಹಿಂದೆ ಎಸ್ ಡಿಪಿ ಐ ನಾಯಕರ ಕೈವಾಡ ಇರುವ ಬಗ್ಗೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು ಇದೀಗ ಎನ್ ಐ ಎ ವಿಚಾರಣೆಯಿಂದ ಇನ್ನಷ್ಟು ನಾಯಕರ ಹೆಸರು ಬರಲಿದೆ ಎಂದು ಕಾದುನೋಡಬೇಕಿದೆ.
