Un networks
ದೇರಳಕಟ್ಟೆ: ಪಂಚಾಯತಿ ಅನುಮತಿಯ ಮೇರೆಗೆ ಬಿಜೆಪಿ ಮುಖಂಡ ಅಳಪಡಿಸಿದ್ದ ವೀರ ಸಾವರ್ಕರ್ ಭಾವ ಚಿತ್ರವಿರೋ ಬ್ಯಾನರನ್ನು ಕೊಣಾಜೆ ಪೊಲೀಸರು ತೆರವುಗೊಳಿಸಿದ್ದಾರೆ.
ದೇರಳಕಟ್ಟೆಯ ಬಳಿ ಸಾರ್ವಕರ್ ಭಾವ ಚಿತ್ರವಿರುವ ಬ್ಯಾನರನ್ನು ಬಿಜೆಪಿ ಅಲ್ಪಸಂಖ್ಯಾತ ಮೋರ್ಛಾದ ಕಾರ್ಯಕಾರಿಣಿ ಸದಸ್ಯ ಫಜಲ್ ಅಸೈಗೋಳಿ ಎಂಬವರು ಬೆಳ್ಮ ಗ್ರಾ.ಪಂ ಅನುಮತಿ ಪಡೆದು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಇವರಿಗೆ ಶತ ಶತ ನಮನಗಳು ಎಂಬ ಬ್ಯಾನರ್ ಆಳಪಡಿಸಿದ್ದರು.
ಬ್ಯಾನರ್ ಅಳಪಡಿಸುವ ಮೊದಲು ಇದಕ್ಕೆ ಸಂಬಂಧಿಸಿದ ಪಂಚಾಯತಿಯಲ್ಲಿ ಸಪ್ಟೆಂಬರ್ 9ರವರೆಗೆ ಬ್ಯಾನರ್ ಅಳವಡಿಸಲು ಅನುಮತಿ ಪಡೆದಿದ್ದರು ಆದರೆ ಸಾವರ್ಕರ್ ವಿವಾದ ಎಲ್ಲೆಡೆ ನಡೆಯುತ್ತಿರುವ ಹಿನ್ನಲೆಯಲ್ಲಿ ಅಹಿತಕರ ಘಟನೆ ಸಾಧ್ಯತೆ ಹಿನ್ನೆಲೆ ಕೊಣಾಜೆ ಪೊಲೀಸರಿಂದ ಬ್ಯಾನರ್ ತೆರವುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
