Site icon Ullalavani

ದ.ಕ ಜಿಲ್ಲೆಯಲ್ಲಿ ಹತ್ಯೆಯಲ್ಲಿ ರಾಜಕೀಯ: ಎಸ್ ಡಿಪಿಐ ಆಕ್ರೋಶ

UN networks

ಮಂಗಳೂರು: ಜಿಲ್ಲೆಯಲ್ಲಿ ಯಾವುದೇ ಕೃತ್ಯ ನಡೆದರೂ ಬಿಜೆಪಿಗರ ಬಾಯಲ್ಲಿ ಬರೋ ಹೆಸರೇ ಎಸ್ಡಿಪಿಐ ನಮಗೆ ಎನ್ ಐಎಗಿಂತ ಕರ್ನಾಟಕ ಪೊಲೀಸ್ ಮೇಲೆ ನಂಬಿಕೆ ಇದೆಅವರಿಗೆ ತನಿಖೆಗೆ ಸಂಪೂರ್ಣ ಅವಕಾಶ ಕೊಡಿ ಎಂದು ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ ಹೇಳಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಎಸ್ ಡಿಪಿಐ ಪಕ್ಷದಿಂದ ಶನಿವಾರ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ದ.ಕ ಜಿಲ್ಲೆಯಲ್ಲಿ ನಡೆದ ಮೂರೂ ಕೊಲೆಯನ್ನು ಎಸ್ಡಿಪಿಐ ಪಕ್ಷ ಖಂಡಿಸುತ್ತದೆ ಸದ್ಯ ಮೂರು ಕೊಲೆ ಆರೋಪಿಗಳ ಬಂಧನ ಆಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ನಾವು ಕೋರುತ್ತೇವೆ ಆದರೆ ಇಲ್ಲಿ ಹತ್ಯೆಯಲ್ಲೂ ರಾಜಕೀಯ ಮಾಡಲಾಗುತ್ತಿದೆ. ಒಂದು ಪ್ರದೇಶದಲ್ಲಿ ಎರಡು ಕೊಲೆ ಆದರೂ ಒಂದು ಕೊಲೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಇನ್ನೊಂದರ ಬಗ್ಗೆ ಕ್ಷುಲ್ಲಕ ಕಾರಣಕ್ಕಾಗಿ ಎಂದು ಬಿಟ್ಟಿದ್ದಾರೆ ಎಂದರು.

ಪ್ರವೀಣ್ ಹತ್ಯೆಯಲ್ಲಿ ಯುಎಪಿಎ ಕಾಯ್ದೆ ಮತ್ತು ಎನ್ಐಎಗೆ ನೀಡುತ್ತಾರೆ. ಅದೇ ಮಸೂದ್ ಹತ್ಯೆಯಲ್ಲಿ ಇಷ್ಟು ಕಾಳಜಿ ಯಾಕಿಲ್ಲ? ಎಂದು ಪ್ರಶ್ನಿಸಿದ ಅವರು
ಪ್ರವೀಣ್ ಹತ್ಯೆ ಆರೋಪಿಗಳು ಸ್ಥಳೀಯರೇ ಆಗಿದ್ದಾರೆ
ಆದರೆ ಫಾಝಿಲ್ ಹತ್ಯೆಯಲ್ಲಿ‌ರುವ ಆರೋಪಿಗಳು ಜಿಲ್ಲೆಯ ಬೇರೆ ಬೇರೆ ಪ್ರದೇಶದವರು
ಎಲ್ಲಿ ಸಂಘಟಿತವಾಗಿ ಹತ್ಯೆ ನಡೆದಿದೆ ಎಂಬುದನ್ನು ಪೊಲೀಸ್ ಇಲಾಖೆ ಸ್ಪಷ್ಟ ಪಡಿಸಲಿ ಎಂದರು.

ಪುತ್ತೂರು ಶಾಸಕರು ಒಂದು ಧರ್ಮಕ್ಕೆ ಮಾತ್ರ ಶಾಸಕರೆ!?
ಪ್ರವೀಣ್ ಆರೋಪಿಗಳಿಗೆ ಮಸೀದಿಯವರು ಬೆಂಬಲಿಸಿದ್ದಾರೆ ಎಂಬ ಪುತ್ತೂರು ಶಾಸಕರ ಹೇಳಿದ್ದಾರೆ. ಫಾಝಿಲ್ ಹತ್ಯೆಕೋರರು ಹತ್ಯೆ ಮಾಡಿ ನೇರ ಕಾರಿಂಜೇಶ್ವರ ದೇವಾಲಯಕ್ಕೆ ಹೋಗಿದ್ದಾರೆ ಇದನ್ನು ಯಾರಾದ್ರೂ ಹೇಳಿದ್ದಾರಾ..?ಶಾಸಕರಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕು.

ಸುಳ್ಯದಲ್ಲಿ ಒಂದೂವರೆ ವರ್ಷ ಮೊದಲು ಬಂದ್ ಮಾಡಲಾದ ಕಚೇರಿಯಲ್ಲಿ ಮಹಜರು ಎಂದು ಬಿಂಬಿಸುತ್ತಾರೆ. ಇದು ಯಾವ ರೀತಿಯ ರಾಜಕೀಯ ವ್ಯವಸ್ಥೆ? ನಮಗೆ ನಮ್ಮ ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇದೆ ನಿಮಗೆ ಪೊಲೀಸ್ ‌ಇಲಾಖೆ ಮೇಲೆ ನಂಬಿಕೆ ಇಲ್ಲದಿದ್ದಾರೆ ಬಿಡಿ ಜಿಲ್ಲೆಯಲ್ಲಿ ನಡೆದ ಎಲ್ಲಾ ಕೊಲೆ ಮೇಲೆ ತನಿಖೆ ಆಗಲಿ. ಯುಎಪಿಎ ಅಡಿ ಎನ್ಐಎ ತನಿಖೆ ಮೂಲಕ ಬಹಿರಂಗ ಪಡಿಸಿ. ಪ್ರವೀಣ್ ಹತ್ಯೆ ಆರೋಪಿಗಳ ಬಂಧನ ವಿಚಾರದಲ್ಲಿ ಸರಿಯಾದ ಕ್ರಮ ಇಲ್ಲ. ಎಲ್ಲಾ ಆಯಾಮದಲ್ಲಿ ತನಿಖೆ ಆಗಿ ಬಂಧನ ಆಗಲಿ ಎಂದರು.

Exit mobile version