Site icon Ullalavani

ಎನ್.ಐ.ಎ ಬಂಧನದ ಭೀತಿಯಲ್ಲಿ ಎಸ್ ಡಿಪಿಐ ಮತ್ತು ಪಿಎಫ್ ಐ ನಾಯಕರು!

Un networks

ಮಂಗಳೂರು:  ಬಿಜೆಪಿ ಮುಖಂಡ ಬೆಳ್ಳಾರೆಯ ಪ್ರವೀಣ್ ಹತ್ಯೆಯ ಹಿಂದೆ ಎಸ್ ಡಿ ಪಿ ಐ ಹಾಗೂ ಪಿ ಎಫ್ ಐ ಕೈವಾಡವಿದೆ ಎಂಬ ಬಗ್ಗೆ  ಪೊಲೀಸ್ ಇಲಾಖೆ ಶಂಕೆ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಇದೀಗ ಎಸ್.ಡಿ.ಪಿ.ಐ ಮತ್ತು ಪಿಎಫ್ ಐ ನಾಯಕರ ಮೇಲೆ ಎನ್ ಐಎ ಕಣ್ಣು ಹಾಯಿಸಿದೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಅವರ ಮೊಬೈಲ್ ಪೋನ್ ಸ್ವಿಚ್ಡ್ ಆಫ್ ಆಗಿರುವುದು ಪ್ರಕರಣಕ್ಕೆ ಇನ್ನಷ್ಟು ಪುಷ್ಠಿ ನೀಡುವಂತೆ ಮಾಡಿದೆ.

ಸುಳ್ಯ ಸೇರಿ ದ.ಕ ಜಿಲ್ಲೆಯ ಕೆಲವೊಂದು ಎಸ್.ಡಿ.ಪಿ.ಐ ಮತ್ತು ಪಿಎಫ್ ಐ ನಾಯಕರತ್ತ  ಎನ್.ಐ.ಎ ದೃಷ್ಟಿ ಹಾಯಿಸಿದೆ. ಪ್ರವೀಣ್ ಹತ್ಯೆಯಾದ ಮೂರನೇ ದಿನದಿಂದ ಎನ್ ಐ ಎ ತಂಡ ದ.ಕನ್ನಡ ಜಿಲ್ಲೆಗೆ ಆಗಮಿಸಿತ್ತು.
ಪ್ರವೀಣ್ ಹತ್ಯೆ ಆರೋಪಿಗಳ ಬಂಧನದ ಬೆನ್ನಲ್ಲೇ ರಾಷ್ಟ್ರೀಯ ತನಿಖಾ ದಳ ಅಲರ್ಟ್ ಆಗಿತ್ತು.
ಕರ್ನಾಟಕ ಪೊಲೀಸರ ಮಾಹಿತಿ ಜೊತೆ ಸ್ವತಂತ್ರ ತನಿಖೆ‌ಯನ್ನು ಎನ್.ಐ.ಎ‌ ನಡೆಸಿದ್ದು ಇದೀಗ ಪ್ರವೀಣ್ ಹತ್ಯೆ ಹಿಂದಿರೋ ದೊಡ್ಡ ದೊಡ್ಡ ಕೈಗಳ ಬಗ್ಗೆ ‌ಸಾಕ್ಷ್ಯ ಸಂಗ್ರಹಿಸುತ್ತಿದೆ.

ಪ್ರವೀಣ್ ಹತ್ಯೆಗೆ ಸಾಥ್ ನೀಡಿದ ಸಾಕ್ಷ್ಯದ ಹಿನ್ನೆಲೆ ಹಾಗೂ ಬಂಧಿತ ಆರೋಪಿಗಳು ಬಾಯ್ಬಿಟ್ಟ ‌ ಕೆಲ ಸಾಕ್ಷ್ಯಗಳ ಆಧಾರದಲ್ಲಿ ಕೆಲವು ನಾಯಕರನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ
ಇನ್ನು ಎರಡು ದಿನದಲ್ಲಿ ಪ್ರಕರಣ ಹಸ್ತಾಂತರವಾದ ಬೆನ್ನಲ್ಲೇ ದೊಡ್ಡ ದೊಡ್ಡ ನಾಯಕರಿಗೆ   ಸಂಕಷ್ಟ ಎದುರಾಗಲಿದೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ.
ಪ್ರವೀಣ್ ಹತ್ಯೆಯ ಹಿಂದೆ ದೊಡ್ಡ ದೊಡ್ಡ ನಾಯಕರ ಭಾಗಿದಾರಿಕೆ  ತನಿಖೆ ಕಾರಣಕ್ಕಾಗಿಯೇ ರಾಜ್ಯ ಸರಕಾರ ಈ ಪ್ರಕರಣವನ್ನು  ಎನ್.ಐ.ಗೆ ವಹಿಸಿತ್ತು ಇದೀಗ  ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಎನ್‌ಐಎ ಶೈಲಿಯಲ್ಲಿ ಪ್ರವೀಣ್ ಹತ್ಯೆ ಪ್ರಕರಣ ತನಿಖೆ ಶುರುವಾಗಲಿದೆ .

ಸದ್ಯ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ತಪ್ಪಿಸಿಕೊಂಡಿರೋ ಎಸ್ ಡಿಪಿಐ, ಪಿಎಫ್ ಐ ನಾಯಕರಿಗೆ ಖೆಡ್ಡಾ

Exit mobile version