Site icon Ullalavani

ಹಿಟ್ ಆಂಡ್ ರನ್
ರಾ.ಹೆ.ಯ ಓರ್ವ ಕಾರ್ಮಿಕ ಮೃತ್ಯು, ಇನ್ನೋರ್ವನಿಗೆ ಗಾಯ

UN networks

ಉಳ್ಳಾಲ: ಅಪರಿಚಿತ ವಾಹನವೊಂದು ರಾಷ್ಟ್ರೀಯ ಹೆದ್ದಾರಿ 66 ರ ಜೆಪ್ಪಿನಮೊಗರು ಬಳಿ ಹುಲ್ಲುಗಳನ್ನು ಕಟಾವು ನಡೆಸುತ್ತಿದ್ದ ಇಬ್ಬರು ಕಾರ್ಮಿಕರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಾಳು ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಹಾರ ಜಾಮೂಲ್ ನಿವಾಸಿ ವಿಕ್ಕಿ ಖಾನ್ (23) ಮೃತ ಕಾರ್ಮಿಕ. ಸಾಸ್ತಾನ ನಿವಾಸಿ ಗೋಪಾಲ್‌ ಪೂಜಾರಿ ಗಾಯಾಳು.


ಹೊರಜಿಲ್ಲೆಯ ಕಾರ್ಮಿಕರಾಗಿದ್ದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಹೆದ್ದಾರಿ ಬಳಿಯ ಹುಲ್ಲುಗಳನ್ನು ಕಟಾವು ನಡೆಸುತ್ತಿದ್ದಾಗ, ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ವಾಹನ ಢಿಕ್ಕಿ ಹೊಡೆದಿದೆ. ಪಿಕಪ್ ವಾಹನದ ಮೇಲೆ ಸಂಶಯ ವ್ಯಕ್ತಪಡಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ನಾಗುರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version