Site icon Ullalavani

ಮಸೂದ್ ಕುಟುಂಬಕ್ಕೆ 30 ಲಕ್ಷ ರೂ ಪರಿಹಾರ

UN networks

ಸುಳ್ಯ: ಇತ್ತೀಚೆಗೆ ಸುಳ್ಯದ ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಮಸೂದ್ ನಿವಾಸಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿ ಭೇಟಿ ನೀಡಿ 30 ಲಕ್ಷ ರೂ. ಪರಿಹಾರ ಚೆಕ್ ನೀಡಿದ್ದಾರೆ.


ಹತ್ಯೆಯಾದ ಮಸೂದ್ ತಾಯಿಗೆ 30 ಲಕ್ಷದ ಚೆಕ್ ವಿತರಿಸಿ ಬಳಿಕ ಮಾತನಾಡಿದ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಸೂದ್ ನಾವು ಪ್ರವೀಣ್ ಕುಟುಂಬಕ್ಕೂ 5-10 ಲಕ್ಷ ಪರಿಹಾರ ಕೊಡಲು ನಿರ್ಧಾರ ಮಾಡಿದ್ದೇವು. ಅವರು ತೆಗೆದುಕೊಳ್ಳಲು ಸಿದ್ಧರಿದ್ದರೆ 100% ಅವರಿಗೂ ಪರಿಹಾರ ಕೊಡುತ್ತೇವೆ. ಆದರೆ ಅವರ ಮನೆಗೆ ಹೋದರೆ ಗಲಾಟೆ ಆಗುತ್ತದೆ ಎಂದು ಸ್ಥಳೀಯರು ಹೇಳಿದ ಕಾರಣ ನಾವು ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅವರ ಸಾವಿನ ಬಗ್ಗೆ ನಮಗೆ ದುಃಖವಿದೆ, ಆ ಕುಟುಂಬಕ್ಕೂ ಸಾಂತ್ವನ ಬೇಕು. ಸುರತ್ಕಲ್ ನ ಫಾಜಿಲ್ ಕುಟುಂಬಕ್ಕೂ 30 ಲಕ್ಷ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

Exit mobile version