Un networks
ಮಂಗಳೂರು: ಫ್ಲ್ಯಾಟ್ ಮಾರಾಟ ಮಾಡುವುದಾಗಿ ರೂ. 4.50 ಲ ರೂ. ಪಡೆದು ವಂಚಿಸಿರುವ ದಂಪತಿ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.
ಕುಡುಪು ಜ್ಯೋತಿನಗರ ನಿವಾಸಿಗಳಾದ ಪ್ರಶಾಂತ್ ರಸ್ಕಿನಾ ಮತ್ತು ಅವರ ಪತ್ನಿ ಜಾಯ್ಸ್ ರೀನಾ ರಸ್ಕಿನಾ ವಂಚಿಸಿದ ದಂಪತಿ. ಜಿ.ಮುರಳೀಧರ ಪೈ ವಂಚನೆಗೊಳಗಾದವರು. ಮುರಳೀಧರ ಪೈ ಅವರಿಗೆ ನೀರುಮಾರ್ಗದ ಕೆಎಂಎಫ್ ಬಳಿಯ ಅಪಾಟ್೯ಮೆಂಟಿನ ಫ್ಲ್ಯಾಟ್ ಅನ್ನು ಮಾರಾಟ ಮಾಡುವುದಾಗಿ ನಂಬಿಸಿದ ದಂಪತಿ ರೂ.4.50 ಲಕ್ಷ ಹಣ ಪಡೆದಿದ್ದರು. ಅದರಂತೆ ಮುರಳೀಧರ ಪೈ ಅವರ ಹೆಸರಿಗೆ ಉಪನೋಂದಣಾಧಿಕಾರಿಯವರ ಕಚೇರಿಯಲ್ಲಿ ನೋಂದಾಯಿಸಲ್ಪಟ್ಟ ಕರಾರು ಪತ್ರದಂತೆ ಮಾರಾಟ ಮಾಡಲು ಒಪ್ಪಿಕೊಂಡಿದ್ದರು. ಆದರೆ ಫ್ಲಯಾಟ್ ಅನ್ನು ಸೇಲ್ ಡೀಡ್ ಮೂಲಕ ನೋಂದಣಿ ಮಾಡದ ದಂಪತಿ, ಫಾಮ್೯ ನಂ. 9 ಮತ್ತು 11 ರ ನೆಪವೊಡ್ಡಿ ಫ್ಲ್ಯಾಟ್ ನೀಡಿರಲಿಲ್ಲ. ಅಲ್ಲದೆ ಫ್ಲ್ಯಾಟ್ ಅನ್ನು ಬೇರೆಯವರ ಹೆಸರಿಗೆ ಮಾರಾಟ ಮಾಡಿ ವಂಚಿಸಿರುವ ಕುರಿತು ಪ್ರಕರಣ ದಾಖಲಾಗಿದೆ.
