Un networks
ಮಂಗಳೂರು: ಬೆಳ್ಳಾರೆಯಲ್ಲಿ ಹತ್ಯೆಯಾಗಿದ್ದ ಪ್ರವೀಣ್ ನೆಟ್ಟಾರು ಪ್ರೀತಿಯಿಂದ ಸಾಕಿದ್ದ ನಾಯಿ ಅಸೌಖ್ಯದಿಂದ ಮೃತಪಟ್ಟಿದೆ. ಪ್ರವೀಣ್ ನೆಟ್ಟಾರು ಸಾವಿನ ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದು ನಾಯಿ ಸೋಮವಾರದಂದು ಸಾವನ್ನಪ್ಪಿದೆ.
ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಹಾಗೂ ಕಾಳಜಿ ಹೊಂದಿದ್ದ ಪ್ರವೀಣ್ ನೆಟ್ಟಾರು ಮನೆಯಲ್ಲಿ ನಾಯಿಯನ್ನು ಸಾಕುತ್ತಿದ್ದರು.
ಪ್ರವೀಣ್ ಹತ್ಯೆಗೂ ಮುನ್ನ ಅವರ ಫೇಸ್ಬುಕ್ನಲ್ಲಿ
ನಾಯಿಗಳ ರಕ್ಷಣೆ ಮಾಡಿದ್ದ ಪೋಸ್ಟ್ ಒಂದನ್ನು ಹಾಕಿ ಮೂಕಪ್ರಾಣಿಗಳನ್ನು ಎಸೆದು ಹೋಗಬೇಡಿ ಎಂದು ಅದರಲ್ಲಿ ಮನವಿ ಮಾಡಿದ್ದರು.ಇವರ ಸಾವಿನ ಬಳಿಕ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಇದು ತುಂಬಾ ವೈರಲ್ ಆಗಿತ್ತು.